Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಡ್ರಗ್ ಕೇಸ್ ನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಜಾಮೀನು ಸಿಕ್ಕರೂ ಇಂದು ಜೈಲಿನಿಂದ ಬಿಡುಗಡೆಯಾಗುವುದು ಅನುಮಾನ ಎನ್ನಲಾಗಿದೆ.
ಸತತ 23 ದಿನಗಳ ಕಸ್ಟಡಿ ಅಂತ್ಯಗೊಂಡಿದ್ದು, ಜಾಮೀನು ಸಿಕ್ಕ ಹಿನ್ನಲೆಯಲ್ಲಿ ಆರ್ಯನ್ ಜೈಲಿನಿಂದ ಹೊರಬರಲು ಕಾತುರದಿಂದ ಕಾಯುತ್ತಿದ್ದಾರೆ.
ಬಾಂಬೆ ಹೈಕೋರ್ಟ್ ನ ಆದೇಶ ಪ್ರತಿ ಇಂದು ಮಧ್ಯಾಹ್ನದ ಬಳಿಕ ಜೈಲಿನ ಅಧಿಕಾರಿಗಳು ಮತ್ತು ಎನ್ ಸಿಬಿ ಅಧಿಕಾರಿಗಳಿಗೆ ಕೈ ಸೇರಲಿದೆ. ಇದಾದ ಬಳಿಕ ಕಾನೂನು ಪ್ರಕ್ರಿಯೆ ಮುಗಿದು ಆರ್ಯನ್ ನಾಳೆ ಜೈಲಿನಿಂದ ಹೊರಬರುವ ಸಾಧ‍್ಯತೆಯಿದೆ.