Publish Date: Thu, 28 Oct 2021 (17:20 IST)
Updated Date: Thu, 28 Oct 2021 (17:21 IST)
ಮುಂಬೈ: ಡ್ರಗ್ ಕೇಸ್ ಗೆ ಸಂಬಂಧಪಟ್ಟಂತೆ ಬಂಧನದಲ್ಲಿದ್ದ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಕೊನೆಗೂ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಆರ್ಯನ್ ಬಂಧನಕ್ಕೆ ಸೂಕ್ತ ಕಾರಣ ನೀಡಿರಲಿಲ್ಲ. ಅವರ ವಿರುದ್ಧದ ಆರೋಪಗಳಿಗೆ ಸಾಕ್ಷ್ಯಗಳೂ ಇಲ್ಲ ಎಂದು ಆರ್ಯನ್ ಪರ ವಕೀಲರು ವಾದ ಮಂಡಿಸಿದ್ದರು. ಅತ್ತ ಎನ್ ಸಿಬಿ ಪರ ವಕೀಲರು ಡ್ರಗ್ ಪೂರೈಕೆ ಬಗ್ಗೆ ಆರ್ಯನ್ ಗೆ ಮಾಹಿತಿಯಿತ್ತು. ಅದು ಎಲ್ಲಿಂದ ಬರುತ್ತದೆ ಎಂದೂ ಅವರಿಗೆ ಗೊತ್ತಿತ್ತು. ಹೀಗಾಗಿ ಅವರಿಗೆ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದ್ದರು.
ಇದೀಗ ಬಾಂಬೆ ಹೈಕೋರ್ಟ್ ಎರಡೂ ಕಡೆಯ ವಾದ ವಿವಾದ ಆಲಿಸಿ ಜಾಮೀನು ಮಂಜೂರು ಮಾಡಿದೆ. ಆದರೆ ಜಾಮೀನು ಮಂಜೂರು ಮಾಡಿರುವುದಕ್ಕೆ ಕಾರಣವೇನೆಂದು ನಾಳೆ ವಿವರಣೆ ನೀಡಲಿದೆ.