ಹೈದರಾಬಾದ್ : ಹೆಚ್ಚಾಗಿ ಸಿನಿಮಾ ನಟಿಯರ ಅಂದ- ಚೆಂದ, ಅವರ ನಟನೆಯನ್ನು ನೋಡಿ ಹೆಚ್ಚಿನವರು ಅವರನ್ನು ಇಷ್ಟಪಡುತ್ತಾರೆ. ಈ ವಿಷಯ ಸರ್ವೆಸಾಮಾನ್ಯ. ಆದರೆ ಇಲ್ಲೊಬ್ಬ ಯುವಕ ನಟಿ ತಾಪ್ಸಿ ಪನ್ನಾ ಅವರನ್ನು ಮದುವೆಯಾಗುವ ಆಸೆಯನ್ನು ವ್ಯಕ್ತಪಡಿಸಿ ಇ - ಮೇಲ್ ಮೂಲಕ ಮದುವೆ ಪ್ರಪೋಸಲ್ ಕಳುಹಿಸಿದ್ದಾನಂತೆ.
ತೆಲುಗು, ತಮಿಳಿನ ಹಲವು ಸಿನಿಮಾಗಳಲ್ಲಿ ನಟಿಸಿ ಹೆಸರು ಗಳಿಸಿದ ನಟಿ ತಾಪ್ಸಿ ಪನ್ನಾ ಅವರು ಬಾಲಿವುಡ್ ನಲ್ಲೂ ತಮ್ಮ ನಟನೆಯ ಕೈಚಳಕ ತೋರಿಸಿ ಜನರ ಮನಗೆದ್ದ ಈ ನಟಿಗೆ ಇದೀಗ ಯಾರೋ ಅಪರಿಚಿತ ಯುವಕನೊಬ್ಬ ಇ - ಮೇಲ್ ಮೂಲಕ,’ ಹಲೋ ತಾಪ್ಸಿ ಪನ್ನು , ಐ ಲವ್ ಯೂ . ನನ್ನನ್ನು ಮದ್ವೆಯಾಗ್ತೀಯಾ ? ನಾನು ಬ್ರಹ್ಮಚಾರಿ , ಹೆಂಡ ಕುಡಿಯಲ್ಲ , ಪ್ಯೂರ್ ವೆಜ್ , ಸುಳ್ಳು ಪರೀಕ್ಷೆ , ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಳಿಗೆ ಸದಾ ಸಿದ್ಧ . ನನ್ನನ್ನು ಮದುವೆಯಾಗು ' ಎಂದು ಪ್ರೇಮ ನಿವೇದನೆ ಮಾಡಿಕೊಂಡಿದ್ದಾನಂತೆ.
ನಟಿ ತಾಪ್ಸಿ ಪನ್ನಾ ಅವರು ಈ ವಿಷಯದ ಬಗ್ಗೆ ತಮ್ಮ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು, ‘ಎಂದೂ ಮರೆಯಲಾಗದ ವಿವಾಹ ನಿವೇದನೆ , ಇದೊಂಥರಾ ವೆಜಿಟೇರಿಯನ್ ಲವ್ ' ಎಂದು ಸ್ವತಃ ತಾವೇ ಬರೆದುಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ