ಮಂಗಳೂರು: ಮಂಗಳೂರಿನಲ್ಲಿ ಒಬ್ಬ ಯುವಕ ತನ್ನ ತಾಯಿ ಬಾಲಿವುಡ್ ನಟಿ ಐಶ್ವರ್ಯಾ ರೈ ಎಂದು ಹೇಳುತ್ತಿದ್ದಾನೆ. ಚೆನ್ನೈನಲ್ಲಿ ಸೌಂಡ್ ಇಂಜಿನಿಯರ್ ಕೆಲಸಮಾಡುತ್ತಿರುವ 27 ವರ್ಷದ ಸಂಪತ್ ಕುಮಾರ್ ಎಂಬಾತ ಈ ರೀತಿಯಾದ ಹೇಳಿಕೆ ನೀಡಿದವನು.
ತುಳು ಚಿತ್ರದ ಕೆಲಸಕ್ಕಾಗಿ ಮಂಗಳೂರಿಗೆ ಬಂದಿರುವ ಈತ ತನ್ನ ತಂದೆ ಆಂಧ್ರಪ್ರದೇಶದ ಮಾವುಲು ಆದಿರೆಡ್ಡಿ. ಇವರು ಐಶ್ವರ್ಯಾ ರೈ ಸಹಾಯದಿಂದ ಟೆಸ್ಟ್ ಟ್ಯೂಬ್ ಮೂಲಕ ಮಗು ಪಡೆದಿದ್ದರು. 2ವರ್ಷದವೆಗೂ ಐಶ್ವರ್ಯಾ ಅವರ ಕುಟುಂಬದ ಜೊತೆ ಆ ಮಗು ಇತ್ತು. ಆ ಮಗು ತಾನೆ ಎಂಬುದಾಗಿ ತಿಳಿಸಿದ್ದಾನೆ. ನಂತರ ಆತನ ತಂದೆ ಆತನ್ನು ಆಂಧ್ರಪ್ರದೇಶಕ್ಕೆ ಕರೆದುಕೊಂಡು ಹೋಗಿರುವುದಾಗಿ ಹೇಳಿದ್ದಾನೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಆತನ ಬಳಿ ಯಾವುದೇ ದಾಖಲೆಗಳಿಲ್ಲ. ಆದರೆ ಐಶ್ವರ್ಯಾ ರೈ ಕುಟುಂಬದವರು ತನ್ನನ್ನು ನೋಡಿದರೆ ಗುರುತಿಸುತ್ತಾರೆ ಎಂಬುದು ಆತನ ಅಭಿಪ್ರಾಯವಾಗಿದೆ.
ಬಾಲಿವುಡ್ ನಟಿ ಐಶ್ವರ್ಯಾ ರೈಅವರು ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಿದ್ದು ಅವರಿಬ್ಬರಿಗೂ ಒಂದು ಮಗು ಕೂಡ ಇದೆ. ಈಗ ಈ ವಿಷಯ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.