ಮುಂಬೈ : ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ತಮ್ಮ ಪತ್ನಿ ನಟಿ ಐಶ್ವರ್ಯ ರೈ ಬಚ್ಚನ್ ವಿರುದ್ದ ಬ್ರೋಕೊಲಿ ಡಿಶ್ ಒಂದರ ಕುರಿತಾಗಿ ಟ್ವೀಟರ್ ನಲ್ಲಿ ಅಭಿಮಾನಿಗಳಿಗೆ ದೂರು ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಬ್ರೋಕೊಲಿ ಡಿಶ್ ಬಗ್ಗೆ ಅಭಿಷೇಕ್ ಅವರು ಟ್ವೀಟ್ ಮಾಡಿ ಯಾಕೆ ಬ್ರೊಕೊಲಿ ಡಿಶ್ ತಯಾರಿಸಬೇಕು? ಅದನ್ನು ಯಾರು ಇಷ್ಟಪಡ್ತಾರೆ ? ಎಂದು ಹೇಳಿಕೊಂಡಿದ್ದರು. ಇದನ್ನು ನೋಡಿದ ನಟಿ ಐಶ್ವರ್ಯ ರೈ ಬಚ್ಚನ್ ಅವರು ಅಭಿಷೇಕ್ ಬಚ್ಚನ್ ಅವರಿಗೆ ಬ್ರೊಕೊಲಿ ಡಿಶ್ ಮಾಡಿ ತಿನ್ನಿಸಿದ್ದಾರಂತೆ.
ಈ ಬಗ್ಗೆ ಅಭಿಷೇಕ್ ಬಚ್ಚನ್ ಅವರು ಟ್ವೀಟರ್ ನಲ್ಲಿ ನನ್ನ ಹಳೆ ಪೋಸ್ಟ್ ನೋಡಿರುವ ಪತ್ನಿ ಸೇಡು ತೀರಿಸಿಕೊಂಡಿದ್ದಾರೆಂದು ಟ್ವಿಟ್ ಮಾಡಿ ಪತ್ನಿಯ ಬಗ್ಗೆ ಅಭಿಮಾನಿಗಳಲ್ಲಿ ದೂರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಭಿಮಾನಿಗಳು . ಪತ್ನಿ ಮಾಡಿದ್ದನ್ನು ಸುಮ್ಮನೆ ತಿನ್ನಿ ಎಂದು ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ