Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೋನಂ ಕಪೂರ್ ಹಾಟ್ ಅವತಾರದಲ್ಲಿ ನಟಿಸಲು ಗಂಡನ ಮನೆಯವರ ಬೆಂಬಲವಿದೆಯೇ? ಈ ಬಗ್ಗೆ ಸೋನಂ ಹೇಳಿದ್ದೇನು ಗೊತ್ತಾ?

ಸೋನಂ ಕಪೂರ್ ಹಾಟ್ ಅವತಾರದಲ್ಲಿ ನಟಿಸಲು ಗಂಡನ ಮನೆಯವರ ಬೆಂಬಲವಿದೆಯೇ? ಈ ಬಗ್ಗೆ ಸೋನಂ ಹೇಳಿದ್ದೇನು ಗೊತ್ತಾ?
ಮುಂಬೈ , ಬುಧವಾರ, 30 ಮೇ 2018 (06:12 IST)
ಮುಂಬೈ : ಇತ್ತೀಚೆಗಷ್ಟೇ ಮದುವೆಯಾದ ಬಾಲಿವುಡ್ ನಟಿ ಸೋನಂ ಕಪೂರ್ ಅವರು ಈಗ ಸಿನಿಮಾಗಳಲ್ಲಿ ಹಾಟ್ ಅವತಾರದಲ್ಲಿ ಕಾಣಿಸಿಕೊಂಡರೆ ಇದಕ್ಕೆ ಅವರ ಗಂಡನ ಮನೆಯವರು ಬೆಂಬಲಿಸುತ್ತಾರೆಯೇ? ಎಂಬ ಪ್ರಶ್ನೆ ಹಲವರಲ್ಲಿತ್ತು. ಈ ಬಗ್ಗೆ ಇದೀಗ  ನಟಿ ಸೋನಂ ಕಪೂರ್ ಅವರು ಸ್ಪಷ್ಟನೆ ನೀಡಿದ್ದಾರೆ.


ಸೋನಂ ಕಪೂರ್ ಅವರು ಅಭಿನಯಿಸಿರುವ 'ವೀರೇ ದಿ ವೆಡ್ಡಿಂಗ್ ' ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡಿದ್ದು, ಇದರಲ್ಲಿ ಅವರು ಸಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ತನ್ನ ಬೋಲ್ಡ್ ಅವತಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸೋನಂ ಕಪೂರ್ ಅವರು ಹಳೆ ಪದ್ಧತಿ-ಶೈಲಿಯನ್ನು ಬದಲಿಸುವ ಪ್ರಯತ್ನ ಮಾಡ್ತಿದ್ದಾರಂತೆ. ಹಾಗೇ ಯುವಕರ ಚಿಂತನೆ ಬದಲಿಸುವ ಜೊತೆಗೆ ಮನರಂಜನೆ ನೀಡಲು ಸೋನಂ ಬಯಸುತ್ತಿದ್ದಾರಂತೆ.


 ‘ಚಿತ್ರ ಬಿಡುಗಡೆಯಾಗುವವರೆಗೂ ಈ ಬಗ್ಗೆ ಹೆಚ್ಚು ಯೋಚನೆ ಮಾಡೋದಿಲ್ಲ. ನಾವು ಸಾಕಷ್ಟು ಕಷ್ಟಪಟ್ಟು ಚಿತ್ರ ತಯಾರಿಸಿದ್ದೇವೆ. ಒಳ್ಳೆಯ ಫಲಿತಾಂಶ ಬರುವ ನಿರೀಕ್ಷೆಯಿದೆ. ಬೋಲ್ಡ್ ಸೀನ್ ಮಾಡುವ ಬಗ್ಗೆ ಮನೆ ಹಾಗೂ ಗಂಡನ ಮನೆಯವರಿಂದ ಯಾವುದೇ ವಿರೋಧವಿಲ್ಲ. ಇದು ನನ್ನ ಕೆಲಸ. ಇದ್ರಲ್ಲಿ ಸಂಕೋಚಪಟ್ಟುಕೊಳ್ಳುವುದು ಏನೂ ಇಲ್ಲ. ಗಂಡನ ಮನೆಯವರು ನನ್ನ ಕೆಲಸವನ್ನು ಗೌರವಿಸುತ್ತಾರೆ. ನನ್ನ ಕೆಲಸವನ್ನು ಶ್ಲಾಘಿಸುತ್ತಾರೆ ಎಂದು ಸೋನಂ ಹೇಳಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಂಬಿ ಮಗ ಅಭಿಷೇಕ್ ನ ‘ಅಮರ್’ ಚಿತ್ರಕ್ಕೆ ಶುಭ ಹಾರೈಸಿದ ನಟ ದರ್ಶನ್