ಬೆಂಗಳೂರು: ಕಾಶಿಗೆ ತೀರ್ಥ ಯಾತ್ರೆ ಹೋದರೆ ನಮ್ಮ ಇಷ್ಟದ ಯಾವುದಾದರೊಂದು ವಸ್ತುವನ್ನು ಬಿಟ್ಟು ಬರಬೇಕು ಎಂಬ ನಿಯಮವಿದೆ.
ನಾವು ಇಷ್ಟಪಡುವ ಆಹಾರ ವಸ್ತುವೋ, ಅಭ್ಯಾಸವೋ ಯಾವುದನ್ನಾದರೂ ಬಿಟ್ಟು ಬಂದರೆ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ. ಆದರೆ ಹೀಗೆ ಮಾಡುವುದೇಕೆ ಗೊತ್ತಾ?
ನಮ್ಮ ಈ ದೇಹ ಹಲವು ಬಾಹ್ಯ ವ್ಯಾಮೋಹಗಳಿಗೆ ಒಳಗಾಗಿರುತ್ತದೆ. ಅಂತಹ ವ್ಯಾಮೋಹವನ್ನು ಬಿಟ್ಟರೆ ನಮ್ಮ ದೇಹ, ಮನಸ್ಸು ಇನ್ನಷ್ಟು ಶುದ್ಧಿಯಾಗುತ್ತದೆ. ಹಾಗೆಯೇ ಭಗವಂತನ ಕಡೆಗೆ ನಮ್ಮ ಧ್ಯಾನವಿರುತ್ತದೆ. ವ್ಯಾಮೋಹಗಳಿಗೆ ಒಳಗಾಗಿ ಕೆಡುಕು ಮಾಡುವುದಿಲ್ಲ ಎಂಬ ಉದ್ದೇಶಕ್ಕೆ ಕಾಶಿಗೆ ಹೋದರೆ ನಮ್ಮ ಇಷ್ಟದ ವಸ್ತುವನ್ನು ಬಿಟ್ಟು ಬರುತ್ತೇವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ