Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಣ್ಣಿನ ಸುತ್ತವಿರುವ ಡಾರ್ಕ್ ಸರ್ಕಲ್ ಕಡಿಮೆ ಮಾಡಲು ಇದನ್ನೊಮ್ಮೆ ಪ್ರಯತ್ನಿಸಿ ನೋಡಿ

ಕಣ್ಣಿನ ಸುತ್ತವಿರುವ ಡಾರ್ಕ್ ಸರ್ಕಲ್ ಕಡಿಮೆ ಮಾಡಲು ಇದನ್ನೊಮ್ಮೆ ಪ್ರಯತ್ನಿಸಿ ನೋಡಿ
ಬೆಂಗಳೂರು , ಬುಧವಾರ, 22 ಆಗಸ್ಟ್ 2018 (15:32 IST)
ಬೆಂಗಳೂರು: ಕಣ್ಣಿನ ಸುತ್ತ ಮೂಡುವ ಈ ಕಪ್ಪು ವರ್ತುಲ ಮುಖದ ಸೌಂದರ್ಯವನ್ನೇ ಹಾಳು ಮಾಡಿ ಬಿಡುತ್ತದೆ. ಹೆಣ್ಣುಮಕ್ಕಳೂ ಮಾತ್ರವಲ್ಲ, ಹುಡುಗರು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಇದಕ್ಕೆ ಕಾರಣವು ಹಲವು ಇದ್ದಿರಬಹುದು. ಪರಿಹಾರ ಇಲ್ಲಿದೆ ನೋಡಿ.


ಬಾದಾಮಿ ಎಣ್ಣೆ: ಮಲಗುವ ಮುನ್ನ ಸ್ವಲ್ಪ ಬಾದಾಮಿ ಎಣ್ಣೆಯನ್ನು ಕಣ್ಣಿನ ಸುತ್ತ ಹಚ್ಚಿ ಸ್ವಲ್ಪ ಮಸಾಜ್​ ಮಾಡಿ. ಬೆಳಿಗ್ಗೆ ಎದ್ದು ಮುಖವನ್ನು ತಂಪಾದ ನೀರಿನಿಂದ ತೊಳೆಯಿರಿ.

 

ಸೌತೆಕಾಯಿ: ಸೌವತೆಕಾಯಿ ಕತ್ತರಿಸಿ ಅದನ್ನು 10 ನಿಮಿಷಗಳ ಕಾಲ ಕಣ್ಣುಗಳ ಮೇಲೆ ಇಡಿ. ನಂತರ ಸಾಮಾನ್ಯ ನೀರಿನಿಂದ ಮುಖ ತೊಳೆಯಿರಿ. ಈ ವಿಧಾನ ಕೇವಲ ಕಪ್ಪು ಕಲೆ ತೆಗೆಯುವುದಲ್ಲದೇ ಕಣ್ಣಿಗೆ ಆರಾಮವನ್ನೂ ನೀಡುತ್ತದೆ.

 
ಟೊಮ್ಯಾಟೋ: ಕಪ್ಪು ಕಲೆಗಳಿಗೆ ಟೊಮ್ಯಾಟೋ ಉತ್ತಮ ಪರಿಹಾರ. ಸ್ವಲ್ಪ ಟೊಮ್ಯಾಟೋ ಜ್ಯೂಸ್​ಗೆ ಒಂದು ಚಮಚ ನಿಂಬೆ ರಸವನ್ನು ಸೇರಿಸಿ ಕಣ್ಣಿನ ಸುತ್ತ ಹಚ್ಚಿ. 10 ನಿಮಿಷದ ನಂತರ ನೀರಿನಿಂದ ತೊಳೆಯಿರಿ. ಇದನ್ನು ದಿನಕ್ಕೆ 2 ಬಾರಿ ಆದರೂ ಮಾಡಿ.

 

ಬಟಾಟೆ: ಒಂದು ಅಥವಾ 2 ಬಟಾಟೆಯನ್ನು ತುರಿದು ಅದರ ರಸ ತೆಗೆದು ಕಣ್ಣಿನ ಸುತ್ತ ಹಚ್ಚಿಕೊಳ್ಳಿ. ಹತ್ತು ನಿಮಿಷದ ನಂತರ ನೀರಿನಿಂದ ತೊಳೆಯಿರಿ. ಇದನ್ನು ದಿನಕ್ಕೆ 2 ಬಾರಿಯಂತೆ ಮಾಡುತ್ತಾ ಬಂದರೆ ಕಲೆ ನಿವಾರಣೆಯಾಗುತ್ತದೆ.

 

ರೋಸ್ವಾಟರ್​: ರೋಸ್​ ವಾಟರ್​ ಸ್ಕಿನ್​ ಟೋನರ್​ ಆಗಿ ಕೆಲಸ ಮಾಡುತ್ತದೆ. ಹತ್ತಿಯನ್ನು ರೋಸ್​ ವಾಟರ್​ನಲ್ಲಿ ಅದ್ದಿ, ಕಣ್ಣಿನ ಮೇಲೆ ಇಡಿ. ಪ್ರತಿನಿತ್ಯ ಎರಡು ಬಾರಿ ಹೀಗೆ ಮಾಡುವುದರಿಂದ ಕಪ್ಪು ಕಲೆ ಮಾಯವಾಗುತ್ತದೆ. 

 
ಕಿತ್ತಳೆ ರಸ: ಕಿತ್ತಳೆ ರಸಕ್ಕೆ, ಒಂದೆರಡು ಹನಿ ಗ್ಲಿಸರಿನ್​ ಸೇರಿಸಿ ಕಣ್ಣಿನ ಸುತ್ತ ಹಚ್ಚಿ. ಇದು ಕಪ್ಪು ಕಲೆ ನಿವಾರಿಸುವುದಲ್ಲದೆ, ಕಣ್ಣಿನ ಸುತ್ತ ನೈಸರ್ಗಿಕವಾಗಿಯೇ ಕಾಂತಿ ನೀಡುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಕರಾವಳಿ ಶೈಲಿಯ ಕೋಳಿಸಾರು