Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕರಾವಳಿ ಶೈಲಿಯ ಕೋಳಿಸಾರು

ಕರಾವಳಿ ಶೈಲಿಯ ಕೋಳಿಸಾರು
ಬೆಂಗಳೂರು , ಬುಧವಾರ, 22 ಆಗಸ್ಟ್ 2018 (14:15 IST)
ಕರಾವಳಿ ದೇಶದಲ್ಲಿಯೇ ತನ್ನದೇ ಆದ ವೈವಿದ್ಯತೆಗಳಿಂದ ಬಿಂಬಿತವಾಗಿರುವ ಪ್ರದೇಶ ಇದು ಊಟದ ವಿಷಯದಲ್ಲೂ ಹೌದು ಎನ್ನಬಹುದು ಅದಕ್ಕೆ ಕಾರಣವೂ ಇದೆ ಕರಾವಳಿ ಭಾಗದ ನಾನ್ ವೆಜ್ ಅಡುಗೆಗಳು ದೇಶದ ಇತರೆ ಭಾಗಕ್ಕೆ ಹೋಲಿಸಿದರೆ ವಿಭಿನ್ನವಾಗಿರುತ್ತದೆ ಮತ್ತು ಹೆಚ್ಚು ಖಾರವಾಗಿ ರುಚಿಕರವಾಗಿರುತ್ತದೆ ಅದರಲ್ಲೂ ಕರಾವಳಿ ಭಾಗಗದಲ್ಲಿ ಬಂಡಿಹಬ್ಬದಲ್ಲಿ ಮಾಡುವ ಕೋಳಿಸಾರು ವಿಶೇಷವಾಗಿರುತ್ತದೆ ಅದನ್ನು ಹೇಗೆ ಮಾಡೋದು ಅಂತಾ ಹೇಳ್ತಿವಿ ಒಮ್ಮೆ ಪ್ರಯತ್ನಿಸಿ
ಬೇಕಾಗುವ ಸಾಮಗ್ರಿಗಳು
 
1 ಕೆಜಿ ಕೋಳಿ ಮಾಂಸ
2 /3 ಈರುಳ್ಳಿ ಉದ್ದವಾಗಿ ಹೆಚ್ಚಿರುವುದು
2 ತೆಂಗಿನಕಾಯಿಯ ತುರಿ
ಕೆಂಪು ಮೆಣಸಿನಕಾಯಿ 8 ರಿಂದ 10 (ಖಾರ ಪ್ರೀಯರಾಗಿದ್ದಲ್ಲಿ ಇನ್ನು 4 ಹೆಚ್ಚು)
ಬೆಳ್ಳುಳ್ಳಿ 6 ರಿಂದ 7 ಎಸಳು
ಶುಂಟಿ ಎರಡು ಸಣ್ಣ ತುಂಡು
ಬಾಡೆಸೊಪ್ಪು ಒಂದು ಟಿ ಚಮಚ
ಗಸಗಸೆ ಸ್ವಲ್ಪ
ಅರಿಶಿನ ಪುಡಿ
ಚಕ್ಕೆ ಮತ್ತು ಲವಂಗ ಸ್ವಲ್ಪ
ಜಾಯಿಕಾಯಿ
ಚಕ್ರಮೊಗ್ಗು 2 ರಿಂದ 3
ಪಲಾವ್ ಎಲೆ 2
ಕಾಯಿಯ ಅರ್ಧ ಭಾಗದ ತುರಿಯಿಂದ ತೆಗೆದಿರುವ ಹಾಲು
ಹಸಿ ಮೆಣಸು
ಗೋಡಂಬಿ 7 ರಿಂದ 8
ಉದ್ದಿನಕಾಳು 2 ಚಮಚ
ಗರಂ ಮಸಾಲಾ ಪುಡಿ 2 ಟೀ ಚಮಚ
ದನಿಯಾ 3 -4 ಚಮಚ
ಕರಿಮೆಣಸಿನ ಕಾಳು 6 ರಿಂದ 7
ಟೊಮೇಟೊ 1 (ಚಿಕ್ಕದಾಗಿ ಹೆಚ್ಚಿಕೊಂಡಿರುವ)
ಸ್ವಲ್ಪ ಎಣ್ಣೆ
ಉಪ್ಪು ರುಚಿಗೆ ತಕ್ಕಷ್ಟು
ಕೊತ್ತೊಂಬರಿ ಸೊಪ್ಪು
 
ಮಾಡುವ ವಿಧಾನ - 
 
ಮೊದಲು ಒಂದು ಪಾತ್ರೆಯಲ್ಲಿ ಮಾಂಸವನ್ನು ಚೆನ್ನಾಗಿ ತೊಳೆದುಕೊಂಡು ಅದಕ್ಕೆ ಅರಿಶಿನ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿರಿ ತದನಂತರ ಒಂದು ಬಾಣಲೆಯಲ್ಲಿ ತೆಂಗಿನ ಕಾಯಿಯ ತುರಿ, ಹಸಿಮೆಣಸು, ಹೆಚ್ಚಿರುವ ಈರುಳ್ಳಿ, ಬೆಳ್ಳುಳ್ಳಿ, ಶುಂಟಿ, ಗಸಗಸೆ, ಜಾಯಿಕಾಯಿ, ಚಕ್ಕೆ ಮತ್ತು ಲವಂಗ, ಚಕ್ರಮೊಗ್ಗು, ಬಾಡೆಸೊಪ್ಪು, ಉದ್ದಿನಕಾಳು, ದನಿಯಾ, ಕರಿಮೆಣಸಿನ ಕಾಳು ಹಾಕಿ ಸಣ್ಣ ಬೆಂಕಿ ಊರಿಯಲ್ಲಿ ಚೆನ್ನಾಗಿ ಹುರಿಯಿರಿ ಅದು ತಣ್ಣಗಾದ ಮೇಲೆ ಅದನ್ನು ಒಂದು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ ಹಾಗೆಯೇ ಗೋಡಂಬಿಯನ್ನು ಒಂದು ಚಿಕ್ಕ ಜಾರಿನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
 
ನಂತರ ಮೊದಲೇ ಕಲಸಿಕೊಂಡಿರುವ ಮಾಂಸಕ್ಕೆ ಪಲಾವ ಎಲೆ ಮತ್ತು ಮೊದಲೇ ತೆಗೆದಿಟ್ಟುಕೊಂಡಿರುವ ತೆಂಗಿನ ಕಾಯಿಯ ಹಾಲನ್ನು ಬೆರೆಸಿ ಕುದಿಸಿ ಅದು ಸ್ವಲ್ಪ ಬೆಂದಮೇಲೆ ಅದಕ್ಕೆ ತಯಾರಿದ ಮಸಾಲೆಯನ್ನು ಬೆರೆಸಿ ಹಾಗೂ ಗೋಡಂಬಿ ಪೆಸ್ಟ್ ಅನ್ನು ಸೇರಿಸಿ ತದನಂತರ ಅದಕ್ಕೆ ಗರಂ ಮಸಾಲಾ ಪುಡಿಯನ್ನು ಸೇರಿಸಿ ಚೆನ್ನಾಗಿ ಕುದಿಸಿ ಅದಕ್ಕೆ ಟೊಮೇಟ್ ಅನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಅದರ ಮೇಲೆ ಕೊತ್ತೊಂಬರಿ ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿ ಮೇಲೆ ಉದುರಿಸಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿದರೆ ರುಚಿ ರುಚಿಯಾದ ಕರಾವಳಿ ಶೈಲಿಯ ಕೋಳಿಸಾರು ಸವಿಯಲು ಸಿದ್ಧ.
 
ಇದನ್ನು ಅನ್ನ, ಚಪಾತಿ ಮತ್ತು ಅಕ್ಕಿ ರೊಟ್ಟಿಯೊಂದಿಗೆ ಮತ್ತು ನೀರುದೋಸೆ ಕಾಂಬಿನೇಷನ್ ಉತ್ತಮವಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರೇ ಈ ಭಾಗದಲ್ಲಿ ತುರಿಕೆ ಉಂಟಾದರೆ ಚಿಂತಿಸಬೇಡಿ. ಇವುಗಳನ್ನು ಬಳಸಿ ನೋಡಿ