ಬೆಂಗಳೂರು : ಮುಖದಲ್ಲಿ ಒಂದು ಮೊಡವೆ ಕಂಡರೆ ಸಾಕು, ಮನಸ್ಸಿಗೆ ಏನೋ ಬಂದು ಬಗೆಯ ಕಿರಿಕಿರಿ. ಆ ಮೊಡವೆ ಹೋಗುವವರೆಗೂ ನೆಮ್ಮದಿ ಇರುವುದಿಲ್ಲ. ಇದಕ್ಕೆ ಒಂದು ಮುಖ್ಯವಾದ ಔಷಧಿ ಎಂದರೆ ನಮ್ಮ ಬಾಯಲ್ಲಿರುವ ಎಂಜಲು/ಲಾಲಾರಸ. ಕೇಳಿದರೆ ಆಶ್ಚರ್ಯ ಎನಿಸಬಹುದು. ಆದರೆ ಇದು ನಿಜ. ಸೌಂದರ್ಯ ತಜ್ಞರು ಮತ್ತು ಕೆಲವು ಸಂಶೋಧನೆಯ ಆಧಾರದ ಮೇಲೆ ದೃಢ ಪಡಿಸಲಾಗಿದೆ.
ಮೊಡವೆ ಒಡೆಯುವ ಮುನ್ನವೇ ಲಾಲಾರಸವನ್ನು ಅನ್ವಯಿಸಬೇಕು. ಒಡೆದಮೇಲೆ ಅನ್ವಯಿಸಿದರೆ ಸೋಂಕು ಉಂಟಾಗುವ ಸಂಭವ ಇರುತ್ತದೆ. ಚರ್ಮದ ಮೇಲಾದ ಗಾಯದ ಮೇಲೆ ಅನ್ವಯಿಸಿದರೆ 2-3 ದಿನಗಳಲ್ಲಿ ಗಾಯ ಒಣಗುತ್ತದೆ. ಹಲ್ಲುಜ್ಜುವ ಮುನ್ನ ಬಾಯಲ್ಲಿ ಇರುವ ಲಾಲಾರಸವನ್ನು ಮಾತ್ರ ಅನ್ವಯಿಸಬೇಕು. ದಿನದಲ್ಲಿ ಉಳಿದ ಸಮಯದಲ್ಲಿ ಲಾಲಾರಸದಲ್ಲಿ ಆಹಾರದ ಕಣಗಳು ಇರುವುದರಿಂದ ಅದು ಚರ್ಮದೊಂದಿಗೆ ಪ್ರತಿಕ್ರಿಯಿಸಿ ಸೋಂಕು ಉಂಟುಮಾಡಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ