ಬೆಂಗಳೂರು : ವಿಂಟರ್ ಸೀಸನ್‌ನಲ್ಲಿ ನಿಮ್ಮ ಮಕ್ಕಳಿಗೆ ಎಕ್ಸ್‌ಟ್ರಾ ಕೇರ್ ಬೇಕಾಗುತ್ತದೆ. ಜೊತೆಗೆ ಈ ಸಮಯದಲ್ಲಿ ಬರುವಂತಹ ಕೆಲವೊಂದು ರೋಗಗಳನ್ನು ತಡೆಯುವ ಪ್ರಯತ್ನಗಳನ್ನು ಮಾಡಬೇಕು. ಚಳಿಗಾಲದಲ್ಲಿ ಮಕ್ಕಳ ಸ್ಕಿನ್ ತುಂಬಾ ಡ್ರೈ ಆಗುತ್ತದೆ. ಇದರಿಂದ ಡೈಪರ್ ರಾಶ್, ರಫ್ ಆದ ಕೆನ್ನೆ, ಡೆಡ್ ಸ್ಕಿನ್, ಸ್ಕಾಲ್ಪ್ ಮೊದಲಾದ ಸಮಸ್ಯೆಗಳನ್ನು ಉಂಟು ಮಾಡುತ್ತವೆ.
ಮಕ್ಕಳ ಕೇರ್ ತೆಗೆದುಕೊಳ್ಳಲು ನೀವು ಅನುಸರಿಸಬೇಕಾದ ಅಂಶಗಳು :
ಪ್ರತಿದಿನ ಮಕ್ಕಳಿಗೆ ಸ್ನಾನ ಮಾಡಿಸುವ ಮುನ್ನ ಎಣ್ಣೆಯ ಮಸಾಜ್ ಮಾಡಿ.
ನಿಮ್ಮ ಮಕ್ಕಳಿಗೆ ದಿನದಲ್ಲಿ ಎರಡು ಬಾರಿ ಎಣ್ಣೆಯ ಮಸಾಜ್ ಮಾಡಿ. ಮಕ್ಕಳ ಸ್ನಾನಕ್ಕೆ ಉಗುರು ಬಿಸಿ ನೀರನ್ನು ಮಾತ್ರ ಬಳಕೆ ಮಾಡಿ. ಬಿಸಿ ನೀರು ಬಳಕೆ ಮಾಡಿದರೆ ಮಕ್ಕಳ ಸೂಕ್ಷ್ಮ ಸ್ಕಿನ್ಗೆ ಎಫೆಕ್ಟ್ ಉಂಟಾಗುತ್ತದೆ.
ಆಲಿವ್ ಆಯಿಲ್ ಮತ್ತು ಆಲ್ಮಂಡ್ ಎಣ್ಣೆಯ ಅಂಶ ಹೊಂದಿರುವ ಮಾಯಿಶ್ಚರೈಸರ್ ಬಳಕೆ ಮಾಡಿ. ಇದರಿಂದ ಸ್ಕಿನ್ ಸಾಫ್ಟ್ ಆಗುತ್ತದೆ.
ಮಕ್ಕಳಿಗೆ ಸ್ನಾನ ಮಾಡಿಸಲು ಮೈಲ್ಡ್ ಸೋಪ್ ಮತ್ತು ಶ್ಯಾಂಪೂ ಬಳಕೆ ಮಾಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ