ಬೆಂಗಳೂರು : ಸ್ನಾನವಾದ ಮೇಲೆ ಕೂದಲನ್ನು ಸರಿಯಾಗಿ ಆರೈಕೆ ಮಾಡುವುದರಿಂದ ಕೂದಲಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ದೂರವಾಗುತ್ತದೆ. ಸ್ನಾನವಾದ ಮೇಲೆ ಕೂದಲನ್ನು ಈ ರೀತಿಯಾಗಿ ಆರೈಕೆ ಮಾಡಿ.
*ಮೊದಲಿಗೆ ಕೂದಲಿಗೆ ಸ್ನಾನ ಮಾಡಿಕೊಂಡು ಬಂದ ಬಳಿಕ ಟವೆಲ್‌ನ್ನು ಕೂದಲಿಗೆ ಸುತ್ತಿಕೊಂಡು ಹೆಚ್ಚುವರಿ ಇರುವ ನೀರನ್ನು ತೆಗೆಯಿರಿ. ಕೂದಲಿನಿಂದ ನೀರು ಬರುವುದು ನಿಲ್ಲುವ ತನಕ ಇದನ್ನು ಮುಂದುವರಿಸಿ. ಕೂದಲಿನ ದಪ್ಪ ಹಾಗೂ ಉದ್ದದ ಮೇಲೆ ಸಮಯ ನಿರ್ಧಾರಿತವಾಗಿರುವುದು.
*ಹೆಚ್ಚಿನವರು ತಲೆಗೆ ಸ್ನಾನ ಮಾಡಿಕೊಳ್ಳುವ ಮೊದಲು ಕೂದಲಿಗೆ ಎಣ್ಣೆ ಹಚ್ಚಿಕೊಳ್ಳುವರು. ಆದರೆ ಸ್ನಾನ ಮಾಡಿದ ಬಳಿಕವೂ ತಲೆಗೆ ಎಣ್ಣೆ ಹಚ್ಚಬೇಕು.
*ಕೂದಲಿಗೆ ಸ್ನಾನ ಮಾಡಿದ ಬಳಿಕ ಕೂದಲು ಸುರುಳಿಯಾಗಿರುವುದು. ದೊಡ್ಡ ಹಲ್ಲುಗಳು ಇರುವ ಬಾಚಣಿಗೆಯಿಂದ ಕೂದಲನ್ನು ನೇರವಾಗಿಸಿ.
* ಕೂದಲಿನಲ್ಲಿ ಗಂಟು ಕಟ್ಟಿರುವುದನ್ನು ನಿಧಾನವಾಗಿ ಬಿಡಿಸಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ