ಬೆಂಗಳೂರು : ಲೈಂಗಿಕ ಪ್ರಚೋದನೆಗೆ ತಜ್ಞರು ಅನೇಕ ಸಲಹೆಗಳನ್ನು ನೀಡ್ತಾರೆ. ಅನೇಕ ಸಲಹೆಗಳು ಸೆಕ್ಸ್ ಉತ್ತೇಜಿಸುತ್ತವೆ ಎಂಬುದು ಸಾಬೀತಾಗಿದೆ. ಆದ್ರೆ ಅತಿಯಾದ್ರೆ ಅಮೃತವೂ ವಿಷ. ಕೆಲವೊಂದು ಸಂದರ್ಭಗಳಲ್ಲಿ ಸೆಕ್ಸ್ ಮುಜುಗರದ ಜೊತೆ ಅಪಾಯಕ್ಕೂ ಕಾರಣವಾಗಬಹುದು.
ಸಂಭೋಗದ ವೇಳೆ ಧ್ವನಿ ಹಾಗೂ ಶಬ್ಧ ಸೆಕ್ಸ್ ಉತ್ತೇಜನಕ್ಕೆ ಕಾರಣವಾಗುತ್ತದೆ. ಆದ್ರೆ ಇದೇ ಶಬ್ಧ ನೆರೆಯವರು ಹಾಗೂ ಕುಟುಂಬಸ್ಥರನ್ನು ತಲುಪಿದ್ರೆ ಅವಮಾನ ಗ್ಯಾರಂಟಿ. ನೆರೆಯವರ ಜೊತೆ ನಿಮ್ಮ ಮನಃಸ್ಥಿತಿಯನ್ನೂ ಇದು ಹಾಳು ಮಾಡುತ್ತದೆ.
ಸಂಭೋಗದ ವೇಳೆ ಸಂಗಾತಿಗೆ ಸಣ್ಣ ಪುಟ್ಟ ಗಾಯ ಮಾಡುವುದು ಹಾಗೂ ಕಚ್ಚುವುದು ಕೂಡ ಉತ್ತೇಜನಕಾರಿ ಎಂದು ತಜ್ಞರು ಹೇಳಿದ್ದಾರೆ. ಆದ್ರೆ ಇದು ಅತಿಯಾದ್ರೆ ಅಪಾಯವಾಗೋದು ನಿಶ್ಚಿತ.
ಚಲಿಸುತ್ತಿರುವ ಕಾರ್ ನಲ್ಲಿ ಸೆಕ್ಸ್ ಬೇಡವೇ ಬೇಡ. ಸಂಗಾತಿ ಕಾರು ಚಾಲನೆ ಮಾಡ್ತಿದ್ದಾಗ ಈ ಕೆಲಸಕ್ಕೆ ಕೈ ಹಾಕುವ ಆಲೋಚನೆ ಬಿಟ್ಟು ಬಿಡಿ. ಕಾರನ್ನು ಪಾರ್ಕ್ ಮಾಡಿ ನಂತ್ರ ಒಂದಾದ್ರೆ ಜೀವ ಉಳಿದಂತೆ.
ಸೆಕ್ಸ್ ಸಂಬಂಧವನ್ನು ಗಟ್ಟಿ ಮಾಡುತ್ತದೆ. ಹಾಗಂತ ಸಂಗಾತಿಗೆ ಆಸಕ್ತಿಯಿಲ್ಲದ ಸಮಯದಲ್ಲೂ ಸಂಬಂಧ ಬೆಳೆಸುವ ಕೆಲಸಕ್ಕೆ ಹೋಗಬೇಡಿ. ಇದು ಸಂಬಂಧ ಗಟ್ಟಿ ಮಾಡುವ ಬದಲು ಹಾಳು ಮಾಡುತ್ತದೆ. ನಿಮ್ಮ ಆದೇಶದಂತೆ ಸಂಗಾತಿ ನಡೆದುಕೊಳ್ಳಬೇಕೆಂಬ ಯಾವುದೇ ನಿಯಮವಿಲ್ಲ ಎಂಬುದು ನೆನಪಿರಲಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ