ಟೊಮೆಟೋ ಹಣ್ಣಿನಲ್ಲಿ ನೈಸರ್ಗಿಕ ವಿಟಮಿನ್ಗಳು ಮತ್ತು ಖನಿಜಗಳಾದ ಎ, ಸಿ, ಕೆ, ಬಿ 1, ಬಿ 3, ಬಿ 5, ಬಿ 6 ಮತ್ತು ಬಿ 7 ಇರುತ್ತದೆ. ಇದು ಫೋಲೇಟ್, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ರೋಮಿಯಂ, ಕೋಲೀನ್, ಸತು ಮತ್ತು ರಂಜಕವನ್ನು ಸಹ ಒಳಗೊಂಡಿದೆ. ಟೊಮೆಟೊಗಳನ್ನು ಅತ್ಯಂತ ಶಕ್ತಿಶಾಲಿ ಹಣ್ಣು ಎಂದು ಪರಿಗಣಿಸಲಾಗುತ್ತದೆ.
ಇವುಗಳನ್ನು ಬೇಯಿಸಿ ಅಥವಾ ಹಾಗೆಯೇ ಹಸಿಯಾಗಿ ಸೇವಿಸಬಹುದು. ಟೊಮೆಟೋ ಹಣ್ಣಿನಲ್ಲಿ ನೈಸರ್ಗಿಕ ವಿಟಮಿನ್ಗಳು ಮತ್ತು ಖನಿಜಗಳಾದ ಎ, ಸಿ, ಕೆ, ಬಿ 1, ಬಿ 3, ಬಿ 5, ಬಿ 6 ಮತ್ತು ಬಿ 7 ಇರುತ್ತದೆ. ಇದು ಫೋಲೇಟ್, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ರೋಮಿಯಂ, ಕೋಲೀನ್, ಸತು ಮತ್ತು ರಂಜಕವನ್ನು ಸಹ ಒಳಗೊಂಡಿದೆ. ಈ ಜೀವಸತ್ವಗಳು ಮತ್ತು ಖನಿಜಗಳು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಟೊಮೆಟೋ ಹಣ್ಣಿನಲ್ಲಿ ಫೈಟೊಕೆಮಿಕಲ್ಸ್ ಅಧಿಕವಾಗಿದೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ ಸಿಪ್ಪೆ ಸುಲಿದ ಟೊಮೆಟೋ ಹಣ್ಣನ್ನು ತಿನ್ನುವುದು ತುಂಬಾ ಒಳ್ಳೆಯದು. ಟೊಮೆಟೋ ಸೇವಿಸುವುದರಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆ ದೂರವಾಗುತ್ತದೆ ಎಂಬುವುದಕ್ಕೆ ಇಲ್ಲಿದೆ ಉತ್ತರ.
1. ಕ್ಯಾನ್ಸರ್ ತಡೆಗಟ್ಟುತ್ತದೆ
ಕ್ಯಾನ್ಸರ್ ತಡೆಗಟ್ಟುವಲ್ಲಿ ಟೊಮೆಟೋ ಹಣ್ಣು ಬಹಳಷ್ಟು ಸಹಾಯ ಮಾಡುತ್ತದೆ. ಟೊಮೆಟೋ ಲೈಕೋಪೀನ್ ಎಂಬ ರಾಸಾಯನಿಕವನ್ನು ಹೊಂದಿರುತ್ತದೆ. ಇದು ಕ್ಯಾನ್ಸರ್ ಕೋಶಗಳನ್ನು ನಾಶಮಾಡಲು ಸಹಾಯ ಮಾಡುತ್ತದೆ. ಟೊಮೆಟೊಗಳಲ್ಲಿ ಲೈಕೋಪೀನ್ ಮತ್ತು ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದೆ. ವಾರದಲ್ಲಿ ಕನಿಷ್ಠ ಹತ್ತು ಅಥವಾ ಹೆಚ್ಚು ಟೊಮೆಟೊಗಳನ್ನು ಸೇವಿಸುವ ಮೂಲಕ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು.
2. ಹೃದಯ ಸಂಬಂಧಿ ಕಾಯಿಲೆಯಿಂದ ಮುಕ್ತಿ
ಟೊಮೆಟೋ ಹೃದಯಕ್ಕೆ ಸಂಬಂಧಿಸಿದ ರೋಗವನ್ನು ತಡೆಯಲು ಕೆಲಸ ಮಾಡುತ್ತದೆ. ಇದರಲ್ಲಿ ಪೊಟ್ಯಾಶಿಯಂ, ವಿಟಮಿನ್ ಸಿ, ಫೈಬರ್ ಮತ್ತು ಕೋಲೀನ್ ಸಮೃದ್ಧವಾಗಿದೆ. ನೀವು ದೊಡ್ಡ ಪ್ರಮಾಣದಲ್ಲಿ ಪೊಟ್ಯಾಸಿಯಮ್ ತೆಗೆದುಕೊಳ್ಳಲು ಬಯಸಿದರೆ ಟೊಮೆಟೋಗಳನ್ನು ಸಲಾಡ್ ರೂಪದಲ್ಲಿ ತಿನ್ನಿರಿ. ದಿನಕ್ಕೆ 4039 ಮಿಲಿಗ್ರಾಂ ಪೊಟ್ಯಾಶಿಯಂ ಸೇವಿಸುವ ಜನರು ಹೃದಯದ ಸಮಸ್ಯೆಗಳಿಂದ ದೂರ ಇರುತ್ತಾರೆ ಎಂದು ಸಂಶೋಧನೆ ತೋರಿಸಿದೆ.
3. ಗರ್ಭಕೋಶಕ್ಕೆ ಒಳ್ಳೆಯದು
ಟೊಮೆಟೋ ಗರ್ಭಿಣಿ ಮಹಿಳೆಯರಿಗೆ ತುಂಬಾ ಒಳ್ಳೆಯದು. ಇದರಲ್ಲಿರುವ ಪೋಷಕಾಂಶಗಳು ಮಗು ಮತ್ತು ಮಹಿಳೆ ಇಬ್ಬರಿಗೂ ಅತ್ಯಗತ್ಯ. ಅದಕ್ಕಾಗಿಯೇ ಗರ್ಭಿಣಿಯರು ತಮ್ಮ ಆಹಾರದಲ್ಲಿ ಟೊಮೆಟೋವನ್ನು ಹೆಚ್ಚು ತೆಗೆದುಕೊಳ್ಳಬೇಕು.
4. ಚರ್ಮದ ಆರೋಗ್ಯ ಕಾಪಾಡುತ್ತದೆ
ಟೊಮೆಟೋ ಆರೋಗ್ಯಕ್ಕೆ ಹಾಗೂ ಚರ್ಮಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಲೈಕೋಪೀನ್ ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಟೊಮೆಟೋ ರಸವನ್ನು ಚರ್ಮದ ಮೇಲೆ ಹಚ್ಚಿದರೆ, ಚರ್ಮದ ಹೊಳಪು ಹೆಚ್ಚಾಗುತ್ತದೆ ಮತ್ತು ಚರ್ಮ ಮೃದುವಾಗುತ್ತದೆ.
5. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಯು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಟೊಮೆಟೋದಲ್ಲಿ ವಿಟಮಿನ್ ಸಿ ಇರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಯಲ್ಲಿ, ವಿಟಮಿನ್ ಸಿ ಒತ್ತಡದ ಹಾರ್ಮೋನುಗಳ ಬೆಳವಣಿಗೆಯನ್ನು ನಿಯಂತ್ರಿಸಬಹುದು.