Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತೂಕ ಇಳಿಸಿಕೊಳ್ಳಲು ಸುಲಭ ಮಾರ್ಗ ಏಲಕ್ಕಿ ನೀರು ಸೇವನೆ

ತೂಕ ಇಳಿಸಿಕೊಳ್ಳಲು ಸುಲಭ ಮಾರ್ಗ ಏಲಕ್ಕಿ ನೀರು ಸೇವನೆ
ಬೆಂಗಳೂರು , ಶುಕ್ರವಾರ, 10 ಸೆಪ್ಟಂಬರ್ 2021 (13:45 IST)
ರಕ್ತದೊತ್ತಡವನ್ನು ಕಡಿಮೆ ಮಾಡಲು ಏಲಕ್ಕಿ ಸಹಾಯಕವಾಗಿದೆ. ಇದು ಉತ್ಕರ್ಷಣ ನಿರೋಧಕ ಮತ್ತು ಫೈಬರ್ನಂತಹ ಗುಣಗಳನ್ನು ಹೊಂದಿರುವುದರಿಂದ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

ನೀರು ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆರೋಗ್ಯ ಚೆನ್ನಾಗಿರಲು ನಿಯಮಿತವಾಗಿ ನೀರು ಸೇವಿಸುವುದು ಅತ್ಯಗತ್ಯ. ದೇಹದ ತೂಕ ಇಳಿಸಿಕೊಳ್ಳಲೂ ಸಹ ಸಾಕಷ್ಟು ನೀರು ಕುಡಿಯುವುದಾಗಿ ವೈದ್ಯರು ಸಲಹೆ ನೀಡುತ್ತಾರೆ. ಇದರ ಜತೆಗೆ ಏಲಕ್ಕಿ ಪುಡಿಯನ್ನೂ ಸಹ ಮಿಶ್ರಣ ಮಾಡಿ ಸೇವಿಸಬಹುದು. ಏಲಕ್ಕಿ ನೀರೂ ಸಹ ದೇಹದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅತೊಯಾಗಿ ಸೇವಿಸಿದರೆ ಅಮೃತವೂ ವಿಷ ಎಂಬ ಮಾತಿದೆ. ಹಾಗಾಗಿ ನಿಯಮಿತವಾದ ಏಲಕ್ಕಿ ಸೆವನೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಏಲಕ್ಕಿ ಔಷಧೀಯ ಗುಣಗಳಿಂದ ಕೂಡಿದೆ. ಇದರಲ್ಲಿ ಹಲವು ಪೋಷಕಾಂಶಗಳಿರುತ್ತದೆ. ಏಲಕ್ಕಿಯಲ್ಲಿ ವಿಟಮಿನ್, ರೊಬೋಫ್ಲಾವಿನ್, ನಿಯಾಸಿನ್, ವಿಟಮಿನ್ ಸಿ, ಖನಿಜ, ಕಬ್ಬಿಣ ಅಂಶ, ಮ್ಯಾಂಗನೀಸ್, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಅಂಶಗಳಿರುತ್ತದೆ. ಜತೆಗೆ ಫೈಬರ್, ಆಯಂಟಿಆಯಕ್ಸಿಡೆಂಟ್ಗಳು ಇರುತ್ತವೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನಿಮ್ಮ ದೇಹದಲ್ಲಿರುವ ಫ್ಯಾಟ್ಅನ್ನು ಸುಡುವುದರ ಜತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ರಕ್ತದೊತ್ತಡವನ್ನು ಕಡಿಮೆ ಮಾಡಲು ಏಲಕ್ಕಿ ಸಹಾಯಕವಾಗಿದೆ. ಇದು ಉತ್ಕರ್ಷಣ ನಿರೋಧಕ ಮತ್ತು ಫೈಬರ್ನಂತಹ ಗುಣಗಳನ್ನು ಹೊಂದಿರುವುದರಿಂದ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಏಲಕ್ಕಿಯಲ್ಲಿರುವ ಫೈಬರ್ ಅಂಶ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕ
ಏಲಕ್ಕಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಇದು ಮ್ಯಾಂಗನೀಸ್ ಸಮೃದ್ಧವಾಗಿದೆ. ಜತೆಗೆ ಇದರಲ್ಲಿನ ಖನಿಜವು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ಶೀತ ಮತ್ತು ಕೆಮ್ಮಿಗೆ ಚಿಕಿತ್ಸೆ ನೀಡಬಹುದು
ಏಲಕ್ಕಿ ಮ್ಯೂಕೋಲಿಟಿಕ್ ಗುಣಗಳನ್ನು ಹೊಂದಿದೆ. ಇದು ಕೆಮ್ಮು ಮತ್ತು ಶೀತ ಸಮಸ್ಯೆಯನ್ನು ನಿವಾರಿಸುತ್ತದೆ. ಶ್ವಾಸಕೋಶದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಉಸಿರಾಟ ಕ್ರಿಯೆಯನ್ನು ಸುಧಾರಿಸಲು ಸಹಾಯಕವಾಗಿದೆ.
ಜೀರ್ಣಕಾರಿ ಸಮಸ್ಯೆಯನ್ನು ನಿವಾರಿಸುತ್ತದೆ
ಏಲಕ್ಕಿ ಸೇವನೆಯು ಜೀರ್ಣಕಾರಿ ಸಂಬಂಧಿತ ಸಮಸ್ಯೆಗಳಿಂದ ದೂರವಿರಲು ಸಹಾಯಕವಾಗಿದೆ. ಇದಕ್ಕಾಗಿ 5 ಏಲಕ್ಕಿಗಳನ್ನು ಸಿಪ್ಪೆ ತೆಗೆದು ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಎದ್ದು ಆ ನೀರನ್ನು ಚೆನ್ನಾಗಿ ಬಿಸಿ ಮಾಡಿ. ಈ ನೀರನ್ನು ದಿನಕ್ಕೆ 2 ಬಾರಿ ಕುಡಿಯಬಹುದು. ವಾರಕ್ಕೆ ಎರಡು ದಿನದಂತೆ ಈ ರೀತಿಯ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಇದು ಸಹಾಯಕವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕರ್ಜೂರ ಸೇವನೆ ಮಾಡಿದ್ರೆ ದೇಹಕ್ಕೆ ಶಕ್ತಿ