Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹುಡುಗಿಯರ ಮೀಸೆ ತೆಗೆಯಲು ನ್ಯಾಚುರಲ್ ಉಪಾಯ

ಹುಡುಗಿಯರ ಮೀಸೆ ತೆಗೆಯಲು ನ್ಯಾಚುರಲ್ ಉಪಾಯ
ಬೆಂಗಳೂರು , ಭಾನುವಾರ, 27 ಮೇ 2018 (09:48 IST)
ಬೆಂಗಳೂರು: ಹೆಣ್ಣಿಗೆ ಮೀಸೆ ಬರಕಿಲ್ಲ.. ಅಂತ ಉಪೇಂದ್ರ ಹಾಡಿನಲ್ಲಿ ಹೇಳುತ್ತಾರೆ. ಆದರೆ ಕೆಲವು ಯುವತಿಯರಿಗೆ ತಮ್ಮ ತುಟಿಯ ಮೇಲೆ ಬರುವ ಮೀಸೆ ಅಥವಾ ಕೂದಲಿನದ್ದೇ ಚಿಂತೆಯಾಗುತ್ತದೆ. ಇದನ್ನು ನೈಸರ್ಗಿಕವಾಗಿ ತೆಗೆಯಲು ಕೆಲವು ಉಪಾಯಗಳು ಇಲ್ಲಿವೆ ನೋಡಿ.

ಹಾಲು ಮತ್ತು ಅರಿಸಿನ: ಹಾಲು ಮತ್ತು ಅರಸಿನ ಪುಡಿಯನ್ನು ಮಿಕ್ಸ್ ಮಾಡಿಕೊಂಡು ಪೇಸ್ಟ್ ಮಾಡಿ ಹಚ್ಚಿ.

ಎಗ್ ವೈಟ್ ಮತ್ತು ಕಾರ್ನ್ ಫ್ಲೋರ್: ಸ್ವಲ್ಪ ಎಗ್ ವೈಟ್ ಜತೆಗೆ ಕಾರ್ನ್ ಫ್ಲೋರ್, ಸಕ್ಕರೆ ಮಿಕ್ಸ್ ಮಾಡಿಕೊಂಡು ಮೀಸೆಯ ಜಾಗಕ್ಕೆ ಹಚ್ಚಿ 30 ನಿಮಿಷ ಬಿಡಿ.

ಸಕ್ಕರೆ ಮತ್ತು ನಿಂಬೆ ಹಣ್ಣು: ಒಂದು ಸ್ಪೂನ್ ಸಕ್ಕರೆಗೆ ಎರಡು ಮೂರು ಬಿಂದುಗಳಷ್ಟು ನಿಂಬೆ ರಸ ಸೇರಿಸಿ ಮಿಕ್ಸ್ ಮಾಡಿ ಅದನ್ನು ಹಚ್ಚಿಕೊಂಡು 20 ನಿಮಿಷ ಬಿಡಿ.

ಮಜ್ಜಿಗೆ ಮತ್ತು ಕಡಲೆ ಹಿಟ್ಟು: ಮಜ್ಜಿಗೆ ಮತ್ತು ಕಡಲೆ ಹಿಟ್ಟನ್ನು ಮಿಕ್ಸ್ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ತುಟಿ ಮೇಲಿನ ಕೂದಲಿಗೆ ಮಾತ್ರವಲ್ಲ, ಮುಖದ ಯಾವುದೇ ಭಾಗದಲ್ಲೂ ಅಸಹ್ಯವಾಗಿ ಕೂದಲು ಬೆಳೆದಿದ್ದರೆ ಬಳಸಿಕೊಳ್ಳಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲೆಂದರಲ್ಲಿ ಬೆಳೆಯುವ ತುಂಬೆಗಿಡದಲ್ಲೂ ಇದೆಯಂತೆ ಹಲವು ರೋಗಗಳನ್ನ ಗುಣಪಡಿಸುವ ಗುಣ