ಬೆಂಗಳೂರು : ನಾವು ಹೆಚ್ಚಾಗಿ ಮುಖದ ಅಂದದ ಬಗ್ಗೆ ಹೆಚ್ಚು ಗಮನಕೊಡುತ್ತೇವೆ. ಆದರೆ ಕೈಕಾಲುಗಳ ಅಂದ ಕೂಡ ನಮಗೆ ಮುಖ್ಯ ಎಂಬುದನ್ನು ಮರೆತುಬಿಡುತ್ತೇವೆ. ಹೆಚ್ಚಾಗಿ ಚಳಿಗಾಲ ಬಂದಾಗ ಕೈಕಾಲಿನ ಚರ್ಮಗಳು ಒಡೆಯುತ್ತದೆ. ಇದರಿಂದ ತುಂಬಾ ಉರಿ ಕಾಣಿಸುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಈ ಮನೆಮದ್ದುಗಳನ್ನು ಬಳಸಿ.
. * ಒಂದು ಕಪ್ ಆಲಿವ್ ತೈಲವನ್ನು ಗ್ಲಾಸ್ ಗೆ ಹಾಕಿ. ಇದಕ್ಕೆ ಗುಲಾಬಿ ದಳಗಳನ್ನು ಹಾಗೂ ಲಿಂಬೆ ಸಿಪ್ಪೆಯನ್ನು ಹಾಕಿ ಸುಮಾರು ಒಂದು ವಾರ ತನಕ ತುಂಬಾ ತಣ್ಣಗಿನ ಜಾಗದಲ್ಲಿ ಇಡಿ. ಒಂದು ವಾರ ಬಳಿಕ ಎಣ್ಣೆಯನ್ನು ಸೋಸಿಕೊಳ್ಳಿ. ಪ್ರತಿನಿತ್ಯ ನೀವು ಕೈಗಳಿಗೆ ಈ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ಕೆಲವೇ ದಿನಗಳಲ್ಲಿ ನಿಮಗೆ ವ್ಯತ್ಯಾಸವು ಕಂಡುಬರುವುದು.
* ಕಪ್ಪಾಗಿ ಕಾಣುವಂತಹ ಚರ್ಮದ ಸತ್ತ ಕೋಶಗಳನ್ನು ತೆಗೆಯುವಲ್ಲಿ ಅಡುಗೆ ಸೋಡಾವು ಪ್ರಮುಖ ಪಾತ್ರ ವಹಿಸುವುದು. ತೆಂಗಿನೆಣ್ಣೆಯು ಆಳವಾಗಿ ಪೋಷಣೆ ಹಾಗೂ ಮೊಶ್ಚಿರೈಸ್ ಮಾಡುವುದು. ಒಂದು ಪಿಂಗಾಣಿಯಲ್ಲಿ ¼ ಕಪ್ ಅಡುಗೆ ಸೋಡಾ ಮತ್ತು ½ ಕಪ್ ತೆಂಗಿನೆಣ್ಣೆ ಹಾಕಿಕೊಳ್ಳಿ. ತೆಂಗಿನೆಣ್ಣೆಯು ದ್ರವ ರೂಪದಲ್ಲಿದ್ದರೆ ಇದನ್ನು ಸ್ವಲ್ಪ ಬಿಸಿ ಮಾಡಿ ಬಳಸಿಕೊಳ್ಳಿ. ಎರಡನ್ನು ಸರಿಯಾಗಿ ಮಿಶ್ರ ಮಾಡಿ. ಇದನ್ನು ಕೈಗಳಿಗೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಸುಮಾರು 30 ಸೆಕೆಂಡುಗಳ ಕಾಲ ಸ್ಕ್ರಬ್ ಮಾಡಿಕೊಳ್ಳಿ. ಕೆಲವು ನಿಮಿಷಗಳ ಕಾಲ ಹಾಗೆ ಬಿಡಿ. ಅಂತಿಮವಾಗಿ ಉಗುರುಬೆಚ್ಚಗಿನ ನೀರು ಬಳಸಿಕೊಂಡು ಸ್ಕ್ರಬ್ ಮಾಡಿಕೊಳ್ಳಿ.