Select Your Language

Notifications

webdunia
webdunia
webdunia
webdunia

ಮೊಡವೆ ಒಡೆದ ತಕ್ಷಣ ಕಲೆಯಾಗದಂತೆ ತಡೆಯಲು ಈ ವಿಧಾನ ಅನುಸರಿಸಿ

ಬೆಂಗಳೂರು
ಬೆಂಗಳೂರು : ಹದಿಹರೆಯದಲ್ಲಿ ಸಾಮಾನ್ಯವಾಗಿ ಎಲ್ಲರನ್ನು ಕಾಡುವ ಸಮಸ್ಯೆ ಮೊಡವೆ. ಮಾಲಿನ್ಯ, ಕೊಳಕು, ಸತ್ತ ಜೀವಕೋಶಗಳಿಂದಾಗಿ ಮೊಡವೆ ಕಾಣಿಸಿಕೊಳ್ಳುತ್ತದೆ. ಅಪ್ಪಿತಪ್ಪಿ ಮೊಡವೆಯನ್ನು ಒಡೆದು ಬಿಟ್ಟಿದ್ದರೆ ಚಿಂತೆ ಬೇಡ. ತಕ್ಷಣ ಕೆಲವೊಂದು ಉಪಾಯಗಳನ್ನು ಮಾಡಿದ್ರೆ ಕಲೆಯಾಗದಂತೆ ತಡೆಯಬಹುದು.

 
ಮೊಡವೆ ಒಡೆದ ತಕ್ಷಣ ಟಿಶ್ಯು ಅಥವಾ ಬಟ್ಟೆಯನ್ನು ಮೊಡವೆ ಮೇಲಿಟ್ಟು ಚೆನ್ನಾಗಿ ಒತ್ತಿ. ಇದ್ರಿಂದ ಮೊಡವೆಯಲ್ಲಿರುವ ಕೊಳಕು ಹೊರಗೆ ಬರುತ್ತದೆ. ಹೀಗೆ ಮಾಡುವುದರಿಂದ ಮೊಡವೆ ಕೊಳಕು ಮುಖದ ಬೇರೆ ಜಾಗಕ್ಕೆ ಹರಡುವುದಿಲ್ಲ.

 
ಒಂದು ಸಣ್ಣ ಐಸ್ ತೆಗೆದುಕೊಂಡು ಬಟ್ಟೆಯಲ್ಲಿಟ್ಟು ಮೊಡವೆ ಜಾಗಕ್ಕೆ ಪ್ರೆಸ್ ಮಾಡಿ. ಕೆಲ ಸೆಕೆಂಡುಗಳ ಕಾಲ ಮೊಡವೆ ಮೇಲಿಟ್ಟು ಮತ್ತೆ ತೆಗೆಯಿರಿ. ಮತ್ತೆ ಮೊಡವೆ ಮೇಲಿಡಿ. ಹೀಗೆ 6-7 ಬಾರಿ ಮಾಡಿ. ಬೇವಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿರುವುದರಿಂದ ಅದು ಸೋಂಕು ತಡೆಯುತ್ತದೆ. ಹಾಗಾಗಿ ಮೊಡವೆ ಒಡೆದಾಗ ಕೆಲ ಬೇವಿನ ಎಲೆಯನ್ನು ಅರೆದು ಪೇಸ್ಟ್ ಮಾಡಿ ಮೊಡವೆಗೆ ಹಚ್ಚಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಲಬದ್ಧತೆ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು