ಬೆಂಗಳೂರು: ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಎರಡು ಮೂರು ದಿನವಾದರೂ ಸರಿಯಾಗಿ ಟಾಯ್ಲೆಟ್ ಗೆ ಹೋಗುವುದಿಲ್ಲ. ಅಮ್ಮಂದಿರಿಗೆ ಇದು ಆತಂಕಕ್ಕೆ ನೂಕುತ್ತದೆ. ತಿಂದ ಊಟ ಸರಿಯಾಗಿ ಜೀರ್ಣ ಆಗದೇ ಇದ್ದಾಗ, ಅಥವಾ ಆಹಾರದ ಸಮಸ್ಯೆಯಿಂದಲೂ ಇದು ಸಂಭವಿಸುತ್ತದೆ. ಇನ್ನು ಕೆಲವು ಮಕ್ಕಳಲ್ಲಿ ಟಾಯ್ಲೆಟ್ ಮಾಡುವಾಗ ನೋವು ಕಾಣಿಸಿಕೊಂಡು, ಅದರಿಂದ ರಕ್ತ ಕೂಡ ಬರುತ್ತದೆ. ದೇಹದಲ್ಲಿನ ಉಷ್ಣತೆಯ ಕಾರಣದಿಂದ ಹೀಗೆ ಆಗುತ್ತದೆ. ಇದಕ್ಕೊಂದು ಪರಿಹಾರವೂ ಇದೆ. ಮನೆಯಲ್ಲಿ ಪ್ರಯತ್ನಿಸಿ ನೋಡಿ.
1.ಸಾಕಷ್ಟು ಹದ ಬಿಸಿ ನೀರನ್ನು ಕುಡಿಸಿ. ರಾಥ್ರಿ ಮಲಗುವ ಮೊದಲು, ಬೆಳಿಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರನ್ನು ಕುಡಿಸಿ.
2. ಎರಡು ಲೋಟ ನೀರಿಗೆ 4 ಚಮಚ ಹೆಸರುಬೇಳೆ ಹಾಕಿ ಈ ಮಿಶ್ರಣ ಒಂದು ಲೋಟಕ್ಕೆ ಬರುವವರೆಗೆ ಚೆನ್ನಾಗಿ ಕುದಿಸಿ. ನಂತರ ಎರಡು ಚಮಚ ತುಪ್ಪ ಬೆರೆಸಿ ಹದ ಬಿಸಿ ಇರುವಾಗಲೇ ಇದನ್ನು ಮಕ್ಕಳಿಗೆ ನೀಡಿ.
3. ಸಾಧ್ಯವಾದಷ್ಟು ಸೊಪ್ಪು, ತರಕಾರಿಗಳು ಮತ್ತು ನಾರಿನಾಂಶವಿರುವ ಹಣ್ಣುಗಳನ್ನು ಮಕ್ಕಳಿಗೆ ನೀಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ