ಬೆಂಗಳೂರು: ಕೂದಲು ಉದುರುವಿಕೆ ಸಮಸ್ಯೆಯಿಂದ ಹೈರಾಣಾಗಿದ್ದೀರಾ? ಹಾಗಿದ್ದರೆ ಈ ಅಂಶಗಳನ್ನು ಕೂದಲಿಗೆ ಬಳಸುತ್ತಿರಿ. ಸಮಸ್ಯೆಗೆ ಖಂಡಿತಾ ಪರಿಹಾರ ಸಿಗುತ್ತದೆ.
ವಿಟಮಿನ್ ಬಿ
ಕೂದಲು ಬೆಳವಣಿಗೆಗೆ ಹೆಚ್ಚು ಅಗತ್ಯವಾಗಿರುವುದು ವಿಟಮಿನ್ ಬಿ ಅಂಶ ಅಥವಾ ಬಯೋಟಿನ್. ಇದು ಹೇರಳವಾಗಿರುವುದು ಮಶ್ರೂಮ್, ಪೀನಟ್ ಬಟರ್, ಸಾಲ್ಮನ್ ಫಿಶ್ ಗಳಲ್ಲಿ.
ವಿಟಮಿನ್ ಎ
ಕೂದಲುಗಳ ಅಂಗಾಂಶ ಬೆಳವಣಿಗೆಗೆ ವಿಟಮಿನ್ ಎ ಅಗತ್ಯ. ಕ್ಯಾರಟ್, ಪಾಲಕ್ ನಲ್ಲಿ ಇದು ಹೇರಳವಾಗಿದೆ.
ವಿಟಮಿನ್ ಇ
ಬಾದಾಮಿ, ಬೇಳೆ ಕಾಳುಗಳಲ್ಲಿ ವಿಟಮಿನ್ ಇ ಅಂಶ ಸಾಕಷ್ಟಿರುತ್ತದೆ. ಆರೋಗ್ಯಕರ ಕೂದಲುಗಳ ಬೆಳವಣಿಗೆಗೆ ಇವುಗಳು ಅಗತ್ಯ.
ವಿಟಮಿನ್ ಸಿ
ಕಿತ್ತಳೆ, ಸ್ಟ್ರಾಬೆರಿಯಂತಹ ಹುಳಿ ಮಿಶ್ರಿತ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿರುತ್ತದೆ. ಇದು ಕೂದಲುಗಳ ಬಲವರ್ಧನೆಗೆ ಅಗತ್ಯವಾಗಿದೆ. ಹಾಗಾಗಿ ಈ ಆಹಾರಗಳನ್ನು ಹೆಚ್ಚು ಸೇವಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ