Publish Date: Thu, 01 Nov 2018 (09:14 IST)
Updated Date: Thu, 01 Nov 2018 (09:17 IST)
ಬೆಂಗಳೂರು: ಕೈಗೆ ಹಚ್ಚಿದ ಮೆಹಂದಿ ಎಷ್ಟು ಕೆಂಪಗಾಗುತ್ತೋ ಅಷ್ಟು ಪಾಲು ಗಂಡನ ಪ್ರೀತಿ ಸಿಗುತ್ತದೆ ಎಂಬ ನಂಬಿಕೆ ಕೆಲವರಿಗಿದೆ. ಹಾಗಿದ್ದರೆ ಮೆಹಂದಿ ಹೆಚ್ಚು ಕೆಂಪಗಾಗಲು ಏನು ಮಾಡಬೇಕು?
ಆದಷ್ಟು ರಾಸಾಯನಿಕ ಬಳಸದ ನೈಸರ್ಗಿಕ ಮೆಹಂದಿಯನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದ ಬಣ್ಣ ಕಡುವಾಗುವುದಷ್ಟೇ ಅಲ್ಲದೆ, ಚರ್ಮದ ಅಲರ್ಜಿ ಆಗುವುದನ್ನು ತಪ್ಪಿಸಬಹುದು.
ಮೆಹಂದಿ ಹಚ್ಚಿದ ಬಳಿಕ ಸುಮಾರು 5 ರಿಂದ 6 ಗಂಟೆ ಇಡಿ. ಇದು ಒಣಗಿದ ಮೇಲೆ ಕೈ ಮೇಲೆ ಸ್ವಲ್ಪ ನಿಂಬೆ ರಸ ಮತ್ತು ಸಕ್ಕರೆ ಹಚ್ಚಿಕೊಳ್ಳಿ. ಆದರೆ ನೆನಪಿಡಿ ಮೆಹಂದಿ ತೆಗೆಯಬೇಕಿಲ್ಲ.
ಮೆಹಂದಿ ತೊಳೆದುಕೊಂಡ ಮೇಲೆ ಯಾವುದಾದರೂ ಜೆಲ್ ಹಚ್ಚಿಕೊಳ್ಳಿ. ಮೆಹಂದಿ ತೆಗೆದ ತಕ್ಷಣ ಅದು ಕಡು ಬಣ್ಣದಲ್ಲಿ ಕಾಣದಿದ್ದರೂ ನಿಧಾನವಾಗಿ ಹೆಚ್ಚು ಕೆಂಪಗಾಗುವುದನ್ನು ನೀವು ನೋಡಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.