Publish Date: Mon, 10 Sep 2018 (08:56 IST)
Updated Date: Mon, 10 Sep 2018 (08:58 IST)
ಬೆಂಗಳೂರು: ಪರ್ಫ್ಯೂಮ್ ಎಷ್ಟೇ ಮೈಗೆ ಹಾಕಿಕೊಂಡು ಹೋದರೂ ಅರ್ಧ ದಿನಕ್ಕೇ ಅದರ ಸುವಾಸನೆ ಹೋಗುತ್ತದೆ ಎಂಬ ಚಿಂತೆಯೇ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ.
ನಿಮ್ಮ ಚರ್ಮದಲ್ಲಿ ತೇವಾಂಶವಿರುವಾಗ ಅಂದರೆ ಸ್ನಾನ ಮಾಡಿದ ತಕ್ಷಣ ಪರ್ಫ್ಯೂಮ್ ಹಾಕಿಕೊಳ‍್ಳಿ. ಇದರಿಂದ ದೇಹದಲ್ಲಿ ಹೆಚ್ಚು ಸಮಯ ಪರ್ಫ್ಯೂಮ್ ಸುವಾಸನೆ ಉಳಿದುಕೊಳ್ಳುತ್ತದೆ.
ನಾಡಿಮಿಡಿತವಿರುವ ಕಡೆಗೆ ಪರ್ಫ್ಯೂಮ್ ಹಾಕಿಕೊಳ್ಳಿ. ಇದು ಸುದೀರ್ಘ ಕಾಲದವರೆಗೆ ಉಳಿಯುವಂತೆ ನೋಡಿಕೊಳ್ಳುತ್ತದೆ. ಪರ್ಫ್ಯೂಮ್ ಬಳಸುವ ಮೊದಲು ಬಾಡಿ ಕ್ರೀಮ್ ಲೋಷನ್ ಬಳಸಿಕೊಳ್ಳಿ. ಇದರ ಮೇಲೆ ಪರ್ಫ್ಯೂಮ್ ಹಚ್ಚಿಕೊಳ್ಳುವುದರಿಂದ ಸುದೀರ್ಘ ಕಾಲ ಸುವಾಸನೆ ಬೀರುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಕೂದಲುಗಳಿಗೆ ಸ್ವಲ್ಪ ಪರ್ಫ್ಯೂಮ್ ಸ್ಪ್ರೇ ಮಾಡಿಕೊಳ್ಳಿ. ಇದರಿಂದ ನೀವು ಎಲ್ಲೇ ಹೋದರೂ ಸುವಾಸನೆ ಗ್ಯಾರಂಟಿ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.