ಸೌಂದರ್ಯವರ್ಧಕಗಳನ್ನು ಬಳಸುವ ಮೂಲಕ ಸೌಂದರ್ಯವನ್ನು ಹೆಚ್ಚಿಸಕೊಳ್ಳಬಹುದು, ಅದರೆ ಈ ಸೌಂದರ್ಯವರ್ಧಕಗಳಲ್ಲಿ ಕೆಲವೊಂದು ನೈಸರ್ಗಿಕವಾಗಿದ್ದರೆ ಇನ್ನು ಕೆಲವು ರಾಸಾಯನಿಕವಾಗಿರುತ್ತವೆ. ಮುಖದ ಸೌಂದರ್ಯ ವರ್ಧಿಸಲು ಹಾಗೂ ತ್ವಚೆಯ ಆರೈಕೆಯ ಹಲವಾರು ಬಗೆಯ ಸೌಂದರ್ಯ ವರ್ಧಕಗಳಲ್ಲಿ ರೋಸ್ ವಾಟರ್ ಬಳಸುತ್ತಾರೆ. ಇದು ತುಂಬಾ ಅಗ್ಗದ ದರ ಹಾಗೂ ಸುಲಭವಾಗಿ ಸಿಗುತ್ತದೆ.
ಬನ್ನಿ ಈ ರೋಸ್ ವಾಟರ್ ಬಳಸುವುದರಿಂದ ನಮಗೆ ಸಿಗುವ ಲಾಭಗಳೇನು ಎಂಬುದನ್ನು ನೋಡೋಣ
1. ಫೇಸ್ ಕ್ಲೆನ್ಲರ್
1/2 ಚಮಚ ರೋಸ್ ವಾಟರ್‌ನೊಂದಿಗೆ ಸ್ವಲ್ಪ ಗ್ಲಿಸರಿನ್ ಅನ್ನು ಬೆರೆಸಿಕೊಂಡು ಮುಖಕ್ಕೆ ಲೇಪಿಸಿ ನಯವಾಗಿ ಮಸಾಜ್ ಮಾಡಿದರೆ ಹೊಳೆಯುವ ಕಾಂತಿಯುಕ್ತ ತ್ವಚೆ ನಿಮ್ಮದಾಗುತ್ತದೆ.
2. ಮೊಡವೆ ನಿವಾರಣೆಗೆ
1 ಚಮಚ ಲಿಂಬೆರಸಕ್ಕೆ 1 ಚಮಚ ರೋಸ್ ವಾಟರ್ ಬೆರಸಿ, ಮೊಡವೆ ಇರುವ ಸ್ಥಳದಲ್ಲಿ ಇದನ್ನು ಹಚ್ಚಿ 30 ನಿಮಿಷಗಳ ನಂತರ ತಂಪಾದ ನೀರಿನಿಂದ ತೊಳೆದುಕೊಳ್ಳಿ.
3. ಕೂದಲಿನ ಕಂಡೀಶನರ್
ದೈನಂದಿನ ಶಾಂಪೂ ಬಳಸಿಕೊಂಡಿ ಕೂದಲನ್ನು ತೊಳೆದುಕೊಳ್ಳಿ ಮತ್ತು ಕೊನೆಯಲ್ಲಿ 1 ಕಪ್ ರೋಸ್ ವಾಟರ್ ಅನ್ನು ತಲೆಬುಡಕ್ಕೆ ಹಚ್ಚಿಕೊಳ್ಳಿ. ಆಗ ಮತ್ತೆ ತೊಳೆದುಕೊಳ್ಳಬೇಕಾಗಿಲ್ಲ. ಇದು ಕೂದನ್ನು ಆಳವಾಗಿ ಕಂಡೀಶನ್ ಮಾಡಿ ಹೊಳಪು ನೀಡುತ್ತದೆ.
4. ಕಣ್ಣಿನ ಆರೈಕೆಗೆ
2 ಹತ್ತಿಯ ಪ್ಯಾಡ್ ಅನ್ನು ರೋಸ್ ವಾಟರ್‌ನಲ್ಲಿ ಅದ್ದಿಸಿ 10 ನಿಮಿಷಗಳ ಕಾಲ ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಇದು ಕಣ್ಣುಗಳ ಊತವನ್ನು ಕಡಿಮೆ ಮಾಡುತ್ತದೆ.
5. ಟೋನರ್
ಮಲಗುವ ಮುನ್ನ ರೋಸ್ ವಾಟರನ್ನು ಮುಖಕ್ಕೆ ಲೇಪಿಸಿಕೊಂಡರೆ ಸುಕ್ಕು ಕಡಿಮೆ ಮಾಡಿ, ವಯಸ್ಸಾದವರಂತೆ ಕಾಣುವುದನ್ನು ತಡೆಯುತ್ತದೆ ಮತ್ತು ಸಾಂದ್ರತೆ ಹೆಚ್ಚಿಸಿ ತ್ವಚೆ ಸುಂದರವಾಗಿ ಕಂಗೊಳಿಸುವಂತೆ ಮಾಡುತ್ತದೆ.
6 ಒಣಚರ್ಮಕ್ಕಾಗಿ
ಓಟ್ ಮೀಲ್, ಜೇನುತುಪ್ಪ ಮತ್ತು ಹಾಲಿನೊಂದಿಗೆ ರೋಸ್ ವಾಟರ್ ಅನ್ನು ಬೆರೆಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಒಣಗಿದ ಬಳಿಕ ತೆಗೆಯಿರಿ. ಇದು ನಿಮ್ಮ ಚರ್ಮಕ್ಕೆ ತೇವಾಂಶವನ್ನು ನೀಡುವುದು ಮಾತ್ರವಲ್ಲದೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.