ಬೆಂಗಳೂರು: ಮುಖದ ಸೌಂದರ್ಯದ ಕಡೆಗೆ ಎಲ್ಲರೂ ಗಮನಹರಿಸುತ್ತಾರೆ. ಅದೇ ರೀತಿ ಕುತ್ತಿಗೆಗೂ ಅಷ್ಟೇ ಬಿಳುಪು ಬೇಡವೇ? ಹಾಗಿದ್ದರೆ ಬಾದಾಮಿ ಬಳಸಿ ಹೀಗೊಂದು ಸಿಂಪಲ್ ರೆಸಿಪಿ ಮಾಡಿ.
ಬಾದಾಮಿಯಲ್ಲಿರುವ ಪೋಷಕಾಂಶಗಳು ಚರ್ಮದ ಕಾಂತಿಗೆ ತುಂಬಾ ಉತ್ತಮ. ಇದು ತ್ವಚೆಗೆ ಸುಂದರ ಬಣ್ಣ ಕೊಡುತ್ತದೆ. ಅದಕ್ಕೆ ಮಾಡಬೇಕಾಗಿರುವುದು ಇಷ್ಟೇ.
ಒಂದು ಟೇಬಲ್ ಸ್ಪೂನ್ ನಷ್ಟು ಬಾದಾಮಿ ಪೌಡರ್ ತೆಗೆದುಕೊಂಡು ಅದನ್ನು ಹಾಲು ಮತ್ತು ಜೇನು ತುಪ್ಪದೊಂದಿಗೆ ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಕುತ್ತಿಗೆಗೆ ಬಳಿದುಕೊಂಡು ಒಂದೂವರೆ ಗಂಟೆಗಳ ಕಾಲ ಹಾಗೇ ಬಿಡಿ.
ಇದನ್ನೇ ವಾರಕ್ಕೆ ನಾಲ್ಕು ಬಾರಿ ಮಾಡುತ್ತಿರಿ. ಅದಲ್ಲದಿದ್ದರೆ ಬಾದಾಮಿ ಎಣ್ಣೆಯಿಂದ ನಿಯಮಿತವಾಗಿ ಮಸಾಜ್ ಮಾಡುತ್ತಿದ್ದರೆ ಸಾಕು. ಕೆಲವು ವಾರಗಳ ನಂತರ ನಿಮ್ಮ ಕುತ್ತಿಗೆಗೆ ಹಾಲಿನ ಬಿಳುಪು ಬರುತ್ತದೆ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ