ಬೆಂಗಳೂರು: ಪುರುಷರಲ್ಲಿ ವೀರ್ಯಾಣು ಸಂಖ್ಯೆ ಕಡಿಮೆಗೊಳಿಸಲು ಆಹಾರವೂ ಕಾರಣವಾಗಬಹುದು. ಕೆಲವು ಆಹಾರಗಳು ಪುರಷತ್ವಕ್ಕೇ ಕುತ್ತು ತರುತ್ತವೆ. ಅವು ಯಾವುವು ನೋಡೋಣ.
ಸಂಸ್ಕರಿತ ಮಾಂಸ
ಸಂಸ್ಕರಿತ ಮಾಂಸ ಪುರುಷತ್ವಕ್ಕೆ ಕುತ್ತು ತರಬಹುದು. ಸಾವಯವ ಮಾಂಸವಾದರೆ ಸಮಸ್ಯೆಯೇನಿಲ್ಲ. ಸಂಸ್ಕರಿತ ಮಾಂಸ ಪುರಷರಲ್ಲಿ ಶೇ.23 ರಷ್ಟು ವೀರ್ಯಾಣುಗಳ ಸಂಖ್ಯೆ ಕಡಿಮೆ ಮಾಡಬಹುದಂತೆ!
ಕೊಬ್ಬಿನ ಡೈರಿ ಉತ್ಪನ್ನ
ತುಂಬಾ ಕೊಬ್ಬಿನಂಶವಿರುವ ಹಾಲು, ಚೀಸ್ ವೀರ್ಯಾಣುಗಳ ಸಂಖ್ಯೆ ಕಡಿಮೆ ಮಾಡಬಹುದು. ನಿಯಮಿತವಾಗಿ ಡೈರಿ ಉತ್ಪನ್ನಗಳನ್ನು ಸೇವಿಸುವುದು ಒಳ್ಳೆಯದಲ್ಲ.
ಸಿಹಿ ಪಾನೀಯಗಳು
ಹೆಚ್ಚು ಸಕ್ಕರೆ ಅಂಶವಿರುವ ಪಾನೀಯಗಳು, ಸೋಡಾ, ಕಾರ್ಬೋನೇಟೆಡ್ ಡ್ರಿಂಕ್ಸ್ ಗಳು ಪುರುಷತ್ವ ಹರಣ ಮಾಡಬಹುದು. ಕಾರ್ಬೋನೇಟೆಡ್ ಮತ್ತು ಸಕ್ಕರೆ ಅಂಶ ಹೆಚ್ಚಿರುವ ಪಾನೀಯಗಳನ್ನು ನಿಯಮಿತವಾಗಿ ಸೇವಿಸುವುದರಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಬಹುದು.
ಕಫೈನ್ ಅಂಶದ ಪಾನೀಯಗಳು
ಕಾಫಿ ಸೇರಿದಂತೆ ಕಫೈನ್ ಅಂಶ ಹೆಚ್ಚಿರುವ ಪಾನೀಯಗಳನ್ನು ನಿಗದಿಗಿಂತ ಹೆಚ್ಚು ಸೇವಿಸುವುದರಿಂದ ವೀರ್ಯಾಣು ಸಂಖ್ಯೆ ಕಡಿಮೆ ಮಾಡುತ್ತದೆ. ಇದು ಲೈಂಗಿಕ ಸಾಮರಸ್ಯದ ಮೇಲೂ ಪರಿಣಾಮ ಬೀರಬಹುದು.
ಕೊಬ್ಬಿನಂಶದ ಜಂಕ್ ಫುಡ್
ಸಕ್ಕರೆ, ಕೊಬ್ಬಿನಂಶ ಹೆಚ್ಚಿರುವ ಜಂಕ್ ಫುಡ್ ಗಳನ್ನು ಹೆಚ್ಚು ಸೇವಿಸುತ್ತಿದ್ದರೆ ಜೀರ್ಣಕ್ರಿಯೆ, ಹೃದಯ ಮತ್ತು ಪುರುಷತ್ವಕ್ಕೆ ತೊಂದರೆ ತಪ್ಪಿದ್ದಲ್ಲ. ಇಂತಹ ಆಹಾರಗಳು ವೀರ್ಯಾಣುಗಳ ಬೆಳವಣಿಗೆಯನ್ನು ತಡೆಯುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ