ಬೆಂಗಳೂರು: ದಾನ ನೀಡುವುದು ನಮ್ಮ ಸಂಪ್ರದಾಯದ ಪ್ರಕಾರ ಅತ್ಯಂತ ಶ್ರೇಷ್ಠ ಕೆಲಸ. ಅದರಲ್ಲೂ ಗೋ ದಾನ ಎನ್ನುವುದು ಅತ್ಯಂತ ಪುಣ್ಯ ಫಲ ಪ್ರಾಪ್ತಿಯಾಗುವ ಕೆಲಸ. ಇದನ್ನು ಯಾರಿಗೆ ನೀಡಬೇಕು? ತಿಳಿದುಕೊಳ್ಳೋಣ.
ಗೋ ದಾನ ಮಾಡುವಾಗ ಅದು ಶುದ್ಧ ದೇಸೀ ಹಸುವಾಗಿರಬೇಕು. ಅದೂ ಕರು ಸಮೇತ ಹಸುವನ್ನು ದಾನ ಮಾಡಬೇಕು. ತಮ್ಮದೇ ಮನೆಯಲ್ಲಿ ಹುಟ್ಟಿ, ಬೆಳೆದ ಹಸುವನ್ನು ದಾನ ಮಾಡುವುದು ಶ್ರೇಷ್ಠ. ಸಾಮಾನ್ಯವಾಗಿ ಗೋ ದಾನವನ್ನು ಬ್ರಾಹ್ಮಣರಿಗೆ ಮಾಡಲಾಗುತ್ತದೆ. ಕಾರಣವೆಂದರೆ ಗೋ ದಾನ ಮಾಡಿದ ಮೇಲೆ ಆ ಹಸುವನ್ನು ಅವರು ಚೆನ್ನಾಗಿ ಸಾಕಿ, ಸಲಹಿ, ಪೂಜಿಸಿದರೆ ಮಾತ್ರ ದಾನ ಮಾಡಿದವರಿಗೂ ಅದರ ಫಲ ಪ್ರಾಪ್ತಿಯಾಗುವುದು. ಇಲ್ಲದೇ ಹೋದರೆ ಗೋ ದಾನದ ಫಲ ನಿಮಗೆ ಸಿಗದು.