Publish Date: Fri, 24 Jul 2020 (08:39 IST)
Updated Date: Fri, 24 Jul 2020 (08:41 IST)
ಬೆಂಗಳೂರು: ಆಯಾ ನಕ್ಷತ್ರಕ್ಕೆ ಆಯಾ ಗುಣ ಲಕ್ಷಣಗಳಿರುತ್ತವೆ. ಒಂದೊಂದು ನಕ್ಷತ್ರದವರಿಗೆ ಯಾವ ಸ್ವಭಾವ ಮತ್ತು ಅವರ ಹೆಸರು ಯಾವ ರೀತಿ ಆರಂಭವಾಗಬೇಕು ಎಂಬುದರ ಬಗ್ಗೆ ನೋಡುತ್ತಾ ಹೋಗೋಣ.
ಕೃತ್ತಿಕಾ
ಕೃತ್ತಿಕಾ ನಕ್ಷತ್ರದವರು ಒಮ್ಮೆ ನೋಡಿದರೆ ಮತ್ತೆ ನೋಡಬೆಕೆನ್ನಿಸುವ ರೂಪವಂತರು. ಅವರು ಆತ್ಮವಿಶ್ವಾಸಿಗಳು. ತಮ್ಮದೇ ಗೌರವಯುತ ಹುದ್ದೆಯಲ್ಲಿರುತ್ತಾರೆ. ಸಾಹಸಿಗಳು, ನಾಯಕರೂ ಆಗಿರುತ್ತಾರೆ. ಆದರೆ ಹಣಕಾಸಿನ ವಿಚಾರದಲ್ಲಿ ಹಿಡಿತವಿರುವುದಿಲ್ಲ. ಕೆಲವೊಮ್ಮೆ ಅವರ ಹಠವಾದಿ ಗುಣ ಇತರರಿಗೆ ಇಷ್ಟವಾಗದೇ ಹೋಗಬಹುದು. ಈ ನಕ್ಷತ್ರದವರಿಗೆ ಆ, ಈ, ಯು ಮತ್ತು ಎ ಅಕ್ಷರದಿಂದ ಪ್ರಾರಂಭವಾಗುವ ಹೆಸರಿಟ್ಟರೆ ಉತ್ತಮ.