Publish Date: Sun, 09 Aug 2020 (09:39 IST)
Updated Date: Sun, 09 Aug 2020 (09:40 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣಸ್ವಭಾವ ಒಂದೊಂದು ರೀತಿಯಿದ್ದಾಗಿರುತ್ತದೆ. ಹಾಗೆಯೇ ಅವರು ಇನ್ನೊಬ್ಬರ ಜತೆ ಹೊಂದಿಕೊಳ್ಳುವ ರೀತಿಯೂ ಬೇರೆಯದೇ ಆಗಿರುತ್ತದೆ. ಅದೇ ರೀತಿ ಯಾವ ರಾಶಿಯವರು ತಮ್ಮ ಸಂಗಾತಿಯ ಜತೆ ಹೇಗಿರುತ್ತಾರೆ, ಯಾವ ರೀತಿ ನೋಡಿಕೊಳ್ಳುತ್ತಾರೆ ಎಂದು ನೋಡೋಣ.
ಕುಂಭ
ಜಗತ್ತಿಗೇ ಒಳ್ಳೆಯದು ಮಾಡಲು ಹೊರಟಾಗ ನಿಮ್ಮನ್ನೇ ಮರೆತು ಬಿಡಬಹುದು. ಅಂತಹ ಪರೋಪಕಾರಿ ಮನುಷ್ಯ. ಆದರೆ ನಿಜವಾಗಿಯೂ ನಿಮ್ಮನ್ನು ಪ್ರೀತಿಸುತ್ತಿದ್ದರೆ ನಿಮ್ಮ ಬಳಿಗೆ ಬಂದೇ ಬರುತ್ತಾರೆ. ಎಷ್ಟೇ ಮರೆಗುಳಿ ಸ್ವಭಾವದವರಾದರೂ ನಿಮ್ಮ ಮೇಲೆ ಕಾಳಜಿ ಮಾಡುವುದನ್ನು ಮಾತ್ರ ಮರೆಯಲ್ಲ. ನಿಮ್ಮ ಸುತ್ತಲಿನ ಜಗತ್ತನ್ನು ಬದಲಾಯಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ.