Publish Date: Fri, 07 Aug 2020 (09:10 IST)
Updated Date: Fri, 07 Aug 2020 (09:12 IST)
ಬೆಂಗಳೂರು: ಆಯಾ ನಕ್ಷತ್ರಕ್ಕೆ ಆಯಾ ಗುಣ ಲಕ್ಷಣಗಳಿರುತ್ತವೆ. ಒಂದೊಂದು ನಕ್ಷತ್ರದವರಿಗೆ ಯಾವ ಸ್ವಭಾವ ಮತ್ತು ಅವರ ಹೆಸರು ಯಾವ ರೀತಿ ಆರಂಭವಾಗಬೇಕು ಎಂಬುದರ ಬಗ್ಗೆ ನೋಡುತ್ತಾ ಹೋಗೋಣ.
ಜ್ಯೇಷ್ಠ
ಈ ನಕ್ಷತ್ರದವರು ಮೃದು ಸ್ವಭಾವದವರು. ಎಲ್ಲರೊಂದಿಗೆ ಚೆನ್ನಾಗಿ ಬೆರೆಯುವ ಹೃದಯವಂತರು. ಇನ್ನೊಬ್ಬರ ಕಷ್ಟಕ್ಕೆ ಮರುಗುವರು. ಅವರ ಕುಟುಂಬದಲ್ಲೇ ಎಲ್ಲರಿಗಿಂತ ಯಶಸ್ವಿ ಎನಿಸಿಕೊಂಡಿರುತ್ತಾರೆ. ಪ್ರೀತಿ, ಪ್ರೇಮದ ವಿಚಾರದಲ್ಲೂ ಸಕ್ಸಸ್ ಕಾಣುತ್ತಾರೆ. ಆದರೆ ತಮ್ಮ ಕೌಟುಂಬಿಕ ಸಮಸ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳಲ್ಲ. ಕೊಂಚ ತಮ್ಮವರ ಮೇಲೆ ನಿಯಂತ್ರಣ ಸಾಧಿಸುವ ಗುಣ ಇವರ ಮೈನಸ್ ಪಾಯಿಂಟ್. ಇವರಿಗೆ ನೊ, ಯಾ, ಯೀ, ಯೋ ಕಾರದಿಂದ ಆರಂಭವಾಗುವ ಹೆಸರಿಡಬಹುದು.