Publish Date: Thu, 30 Jul 2020 (09:17 IST)
Updated Date: Thu, 30 Jul 2020 (09:18 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣಸ್ವಭಾವ ಒಂದೊಂದು ರೀತಿಯಿದ್ದಾಗಿರುತ್ತದೆ. ಹಾಗೆಯೇ ಅವರು ಇನ್ನೊಬ್ಬರ ಜತೆ ಹೊಂದಿಕೊಳ್ಳುವ ರೀತಿಯೂ ಬೇರೆಯದೇ ಆಗಿರುತ್ತದೆ. ಅದೇ ರೀತಿ ಯಾವ ರಾಶಿಯವರು ತಮ್ಮ ಸಂಗಾತಿಯ ಜತೆ ಹೇಗಿರುತ್ತಾರೆ, ಯಾವ ರೀತಿ ನೋಡಿಕೊಳ್ಳುತ್ತಾರೆ ಎಂದು ನೋಡೋಣ.
ಮಿಥುನ
ಈ ರಾಶಿಯವರು ಸದಾ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ ಸಂಗಾತಿಯನ್ನು ಮರೆಯಲಾರರು. ಸಂಗಾತಿಗಾಗಿ ಸಮಯ ಮಾಡಿಕೊಳ್ಳುತ್ತಾರೆ. ನಿಮ್ಮ ಜತೆಗೆ ನಾನಿದ್ದೇನೆ ಎಂಬ ಭರವಸೆ ತುಂಬುತ್ತಾರೆ. ಇವರ ಸಂವಹ ರೀತಿ ಚೆನ್ನಾಗಿರುತ್ತದೆ. ನಿಮಗಾಗಿ ಯಾವಾಗಲೂ ಹೊಸದನ್ನು ಮಾಡಲು ಪ್ರಯತ್ನಿಸುತ್ತಾರೆ.