Publish Date: Thu, 30 Jul 2020 (09:12 IST)
Updated Date: Thu, 30 Jul 2020 (09:13 IST)
ಬೆಂಗಳೂರು: ಆಯಾ ನಕ್ಷತ್ರಕ್ಕೆ ಆಯಾ ಗುಣ ಲಕ್ಷಣಗಳಿರುತ್ತವೆ. ಒಂದೊಂದು ನಕ್ಷತ್ರದವರಿಗೆ ಯಾವ ಸ್ವಭಾವ ಮತ್ತು ಅವರ ಹೆಸರು ಯಾವ ರೀತಿ ಆರಂಭವಾಗಬೇಕು ಎಂಬುದರ ಬಗ್ಗೆ ನೋಡುತ್ತಾ ಹೋಗೋಣ.
ಪುಷ್ಯ
ಇವರು ವಿಶಾಲ ಹೃದಯಿಗಳು. ಇನ್ನೊಬ್ಬರಿಗೆ ಸಹಾಯ ಮಾಡಲು ಸದಾ ಮುಂದೆ ಬರುವರು. ಆಸೆಗಳನ್ನು ಅದುಮಿಟ್ಟುಕೊಂಡು ಬದುಕುವವರಲ್ಲ. ದೇವರ ಮೇಲೆ ನಂಬಿಕೆಯಳ್ಳವರು, ಹಾಗೆಯೇ ಬುದ್ಧಿವಂತರೂ ಆಗಿರುತ್ತಾರೆ. ಆದರೆ ಇವರಿಗೆ ಯಶಸ್ಸು ಸಿಗಬೇಕಾದರೆ 35 ವರ್ಷವಾಗುತ್ತದೆ. ಕೆಲವೊಮ್ಮೆ ಹಠವಾದಿಗಳಾಗಿರುವುದು ಇವರ ದುರ್ಗುಣ. ಇವರಿಗೆ ಹೂ, ಹೇ, ಹೊ, ದಾ ಅಕ್ಷರದಿಂದ ಆರಂಭವಾಗುವ ಹೆಸರಿಟ್ಟರೆ ಉತ್ತಮ.