Publish Date: Tue, 28 Jul 2020 (08:51 IST)
Updated Date: Tue, 28 Jul 2020 (08:52 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣಸ್ವಭಾವ ಒಂದೊಂದು ರೀತಿಯಿದ್ದಾಗಿರುತ್ತದೆ. ಹಾಗೆಯೇ ಅವರು ಇನ್ನೊಬ್ಬರ ಜತೆ ಹೊಂದಿಕೊಳ್ಳುವ ರೀತಿಯೂ ಬೇರೆಯದೇ ಆಗಿರುತ್ತದೆ. ಅದೇ ರೀತಿ ಯಾವ ರಾಶಿಯವರು ತಮ್ಮ ಸಂಗಾತಿಯ ಜತೆ ಹೇಗಿರುತ್ತಾರೆ, ಯಾವ ರೀತಿ ನೋಡಿಕೊಳ್ಳುತ್ತಾರೆ ಎಂದು ನೋಡೋಣ.
ಮೇಷ
ಮೇಷ ರಾಶಿಯವರು ಸಂಬಂಧದ ವಿಚಾರದಲ್ಲಿ ತುಂಬಾ ನಿಷ್ಠರು. ಸಂಗಾತಿಯ ಬಗೆಗಿನ ಅವರ ನಿಷ್ಠೆಯನ್ನು ಪ್ರಶ್ನೆ ಮಾಡುವಂತೆಯೇ ಇಲ್ಲ. ತಮ್ಮ ಸಂಗಾತಿಗಾಗಿ ಯಾವ ಹೋರಾಟ ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ. ಅವರು ನಿಮ್ಮ ಜೀವನದಲ್ಲಿ ಹೊಸ ಆಶಾಕಿರಣವನ್ನು ತರುತ್ತಾರೆ. ಹಾಗಾಗಿ ಕಣ್ಣು ಮುಚ್ಚಿ ಅವರನ್ನು ನಂಬಬಹುದು.