Publish Date: Mon, 27 Jul 2020 (09:20 IST)
Updated Date: Mon, 27 Jul 2020 (09:48 IST)
ಬೆಂಗಳೂರು: ದಾನ ಮಾಡುವುದು ಅತ್ಯಂತ ಶ್ರೇಷ್ಠ ಕೆಲಸ. ಆದರೆ ದಾನಗಳಲ್ಲೇ ಅತೀ ಶ್ರೇಷ್ಠ ದಾನ ಯಾವುದು ಗೊತ್ತಾ? ಹಿಂದೂ ಸಂಪ್ರದಾಯದ ಪ್ರಕಾರ ಎಲ್ಲಕ್ಕಿಂತ ಶ್ರೇಷ್ಠ ದಾನವೆಂದರೆ ಕನ್ಯಾದಾನ.
ಕನ್ಯಾದಾನ ಮಾಡದೇ ಒಬ್ಬ ವ್ಯಕ್ತಿಯ ಜೀವನ ಪೂರ್ಣವಾಗಲ್ಲವಂತೆ. ಹೀಗಾಗಿಯೇ ಹೆಣ್ಣು ಮಕ್ಕಳ ತಂದೆಯಾಗುವುದು ಅತ್ಯಂತ ಶ್ರೇಯಸ್ಕರ ಎನ್ನುವುದು. ಒಂದು ವೇಳೆ ಸ್ವಂತ ಮಗಳಿಲ್ಲದೇ ಇದ್ದರೆ ದತ್ತು ಪುತ್ರಿಯನ್ನು ಯೋಗ್ಯ ವರನಿಗೆ ಕೊಟ್ಟು ವಿವಾಹ ಮಾಡುವುದೂ ಕನ್ಯಾದಾನವೇ. ಆದರೆ ಪುತ್ರಿಯನ್ನು ಸರಿಯಾದ ವ್ಯಕ್ತಿಗೇ ಮದುವೆ ಮಾಡಿಕೊಡುವುದೂ ಮುಖ್ಯ.