Webdunia - Bharat's app for daily news and videos

Install App

ವಾಸ್ತು ಪ್ರಕಾರ ಮನೆಯಲ್ಲಿ ಕಲಹಕ್ಕೆ ಕಾರಣವಾಗಬಹುದಾದ ವಸ್ತುಗಳು

Krishnaveni K
ಗುರುವಾರ, 15 ಫೆಬ್ರವರಿ 2024 (09:34 IST)
ಬೆಂಗಳೂರು: ಮನೆಯಲ್ಲಿ ಧನಾತ್ಮಕ ಎನರ್ಜಿ ಇಲ್ಲದೇ ಹೋದರೆ ದಾಂಪತ್ಯದಲ್ಲಿ ವಿರಸ, ಕಲಹ, ಮನಸ್ಸಿನ ನೆಮ್ಮದಿಗೆ ಭಂಗ ಇತ್ಯಾದಿ ಸಮಸ್ಯೆಗಳು ಖಂಡಿತಾ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹಾಗಿದ್ದರೆ ಶಾಸ್ತ್ರಗಳ ಪ್ರಕಾರ ಯಾವೆಲ್ಲಾ ವಸ್ತುಗಳು ಮನೆಯ ನೆಮ್ಮದಿ ಕೆಡಿಸುತ್ತವೆ ನೋಡಿ.

ಕೆಲವೊಂದು ವಸ್ತುಗಳು ನಮಗೇ ಗೊತ್ತಿಲ್ಲದೇ ಋಣಾತ್ಮಕತೆಯನ್ನು ಮನೆಯಲ್ಲಿ ಹರಡುತ್ತವೆ. ಇದರಿಂದ ವಿನಾಕಾರಣ ಕೋಪ, ಕಲಹ ಸಾಮಾನ್ಯವಾಗುತ್ತದೆ. ಹೀಗಾಗಿ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ವಾಸ್ತು ಪ್ರಕಾರ ಅಷ್ಟು ಒಳ್ಳೆಯದಲ್ಲ ಎನ್ನಲಾಗುತ್ತದೆ. ಅಂತಹ ವಸ್ತುಗಳ ಬಗ್ಗೆ ತಿಳಿದುಕೊಳ್ಳಿ.

ಬೆಡ್ ರೂಂನಲ್ಲಿ ಕನ್ನಡಿ: ಹೆಚ್ಚಿನವರ ಮನೆಯಲ್ಲಿ ಬೆಡ್‍ ರೂಂನಲ್ಲಿ ಕನ್ನಡಿ ಇದ್ದೇ ಇರುತ್ತದೆ. ಆದರೆ ಕನ್ನಡಿಯ ಪ್ರತಿಬಿಂಬ ಬೆಡ್ ಮೇಲೆ ಬೀಳದಂತೆ ಎಚ್ಚರಿಕೆ ವಹಿಸಿ.
ಗಡಿಯಾರದ ಮುಳ್ಳು ನಿಲ್ಲಬಾರದು: ಸಮಯವನ್ನು ತೋರಿಸುವ ಗಡಿಯಾರದ ಮುಳ್ಳು ನಿಂತರೆ ಅದನ್ನು ಒಂದೋ ರಿಪೇರಿ ಮಾಡಿಸಬೇಕು ಸಾಧ‍್ಯವೇ ಇಲ್ಲದಿದ್ದರೆ ಅದನ್ನು ಮನೆಯಲ್ಲಿಟ್ಟುಕೊಳ್ಳಬೇಡಿ.
ಚೂಪಾದ ಪೀಠೋಪಕರಣಗಳು: ವಿನ್ಯಾಸದ ಹುಚ್ಚಿಗೆ ಬಿದ್ದು ಕೆಲವೊಮ್ಮೆ ಚೂಪಾದ ಅಥವಾ ಅಂಚುಗಳು ಹರಿತವಾದ ಪೀಠೋಪಕರಣಗಳನ್ನು ಇಟ್ಟುಕೊಳ್ಳುತ್ತೇವೆ. ಇಂತಹವುಗಳನ್ನು ಮನೆಯಲ್ಲಿಟ್ಟುಕೊಳ್ಳಬೇಡಿ.
ಕಪ್ಪು ಬೆಡ್ ಶೀಟ್: ನಾವು ಪ್ರತಿನಿತ್ಯ ಬಳಸುವ ಬೆಡ್ ಶೀಟ್ ಮತ್ತು ಕಿಟಿಕಿಗೆ ಅಳವಡಿಸುವ ಕರ್ಟನ್ ಬಣ್ಣ ಕಪ್ಪಗಿರದಂತೆ ನೋಡಿಕೊಳ್ಳಿ.
ಒಡೆದ ಕನ್ನಡಿ: ಅಕಸ್ಮತ್ತಾಗಿ ಕನ್ನಡಿ ಬಿದ್ದು ಒಡೆದು ಹೋದರೂ ಅದನ್ನು ಮನೆಯೊಳಗೇ ನೇತು ಹಾಕುವುದನ್ನು ಬಿಟ್ಟು ತಕ್ಷಣವೇ ಹೊರಗೆ ಬಿಸಾಕಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾರ್ತಿಕ ಮಾಸದಲ್ಲಿ ಹೀಗೆ ಮಾಡುವುದರಿಂದ ಮೋಕ್ಷ ಸಿಗುವುದು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ ತಪ್ಪದೇ ಮಹಾವಿಷ್ಣುವಿನ ಈ ಮಂತ್ರವನ್ನು 21 ಬಾರಿ ಹೇಳಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಕಾರ್ಯ ಸಿದ್ಧಿಯಾಗಬೇಕಾದರೆ ಗಣಪತಿಯ ಈ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments