Publish Date: Fri, 18 Dec 2020 (08:47 IST)
Updated Date: Fri, 18 Dec 2020 (08:50 IST)
ಬೆಂಗಳೂರು: ಮನೆಯಲ್ಲಿ ನಾವು ಮಲಗುವ ಕೋಣೆಯ ವಾಸ್ತು ಸರಿಯಾಗಿದ್ದರೆ ಮಾತ್ರ ಆ ಮನೆಯಲ್ಲಿ ಗಂಡ-ಹೆಂಡಿರ ನಡುವಿನ ಸಂಬಂಧವೂ ಚೆನ್ನಾಗಿರಬಹುದು. ಹೀಗಾಗಿ ವಾಸ್ತು ಪ್ರಕಾರ ನಿಮ್ಮ ಬೆಡ್ ರೂಂ ಹೀಗಿದೆಯೇ ಎಂದು ನೋಡಿಕೊಳ್ಳಿ.
ಮನೆಯ ನೈಋತ್ಯ ಭಾಗದಲ್ಲಿ ಬೆಡ್ ರೂಂ ಇರಬೇಕು. ಈಶಾನ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಆರೋಗ್ಯ ಸಮಸ್ಯೆ ಅಥವಾ ಕಲಹ ಸಮಸ್ಯೆ ಬರಬಹುದು. ನೈಋತ್ಯ ಮೂಲೆಯಲ್ಲಿ ಬೆಡ್ ಇರುವಂತೆ ನೋಡಿಕೊಳ್ಳಿ. ಬೆಡ್ ನ ಮುಂಭಾಗದಲ್ಲಿ ಟಿವಿ ಅಥವಾ ಕನ್ನಡಿ ಇಡಬೇಡಿ. ಗೋಡೆಗಳಿಗೆ ಕಪ್ಪು ಬಣ್ಣ ಬಳಿಯಬೇಡಿ. ದೇವರ ಚಿತ್ರ, ಪೈಂಟಿಂಗ್ ಇರಿಸಬೇಡಿ. ಇದರಿಂದ ಭಾವನಾತ್ಮಕ ಸಮಸ್ಯೆಗಳಾಗುವುದೇ ಹೆಚ್ಚು.