Publish Date: Mon, 17 Aug 2020 (09:00 IST)
Updated Date: Mon, 17 Aug 2020 (09:01 IST)
ಬೆಂಗಳೂರು: ಆಯಾ ನಕ್ಷತ್ರಕ್ಕೆ ಆಯಾ ಗುಣ ಲಕ್ಷಣಗಳಿರುತ್ತವೆ. ಒಂದೊಂದು ನಕ್ಷತ್ರದವರಿಗೆ ಯಾವ ಸ್ವಭಾವ ಮತ್ತು ಅವರ ಹೆಸರು ಯಾವ ರೀತಿ ಆರಂಭವಾಗಬೇಕು ಎಂಬುದರ ಬಗ್ಗೆ ನೋಡುತ್ತಾ ಹೋಗೋಣ.
ರೇವತಿ
ಆತ್ಮವಿಶ್ವಾಸ ಇವರ ಪ್ರಮುಖ ಅಸ್ತ್ರ. ತುಂಬಾ ಬುದ್ಧಿವಂತರು, ಶ್ರೀಮಂತಿಕೆ, ಆಕರ್ಷಕ ವ್ಯಕ್ತಿತ್ವ ಇವರಿಗೆ ಪ್ಲಸ್ ಪಾಯಿಂಟ್. ಯಾವುದೇ ವಿಷಯವಿರಲಿ, ಕ್ರಿಯಾತ್ಮಕವಾಗಿ ಯೋಚನೆ ಮಾಡಬಲ್ಲರು. ಆದರೆ ಕೆಲವೊಮ್ಮೆ ಕೆಲವು ವಿಚಾರಗಳಲ್ಲಿ ತೀರಾ ತಲೆಕೆಡಿಸಿಕೊಳ್ಳುವುದು, ಇನ್ನೊಬ್ಬರ ಜತೆಗೆ ಸ್ನೇಹಪರವಾಗಿ ಇಲ್ಲದೇ ಇರುವುದೇ ಇವರಿಗೆ ಶತ್ರು. ಈ ನಕ್ಷತ್ರದವರಿಗೆ ದೆ, ದೊ, ಚಾ, ಕಾರದಿಂದ ಬರುವ ಹೆಸರಿಡಬಹುದು.