Publish Date: Tue, 19 Feb 2019 (09:01 IST)
Updated Date: Tue, 19 Feb 2019 (09:03 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವ ಒಂದೊಂದು ರೀತಿಯಿರುತ್ತದೆ. ದಿನಕ್ಕೊಂದು ರಾಶಿಯವರ ಗುಣ ಮತ್ತು ಅವಗುಣಗಳನ್ನು ತಿಳಿಯುತ್ತಾ ಸಾಗೋಣ.
ವೃಶ್ಚಿಕಾ ರಾಶಿ
ಈ ರಾಶಿಯವರು ತುಂಬಾ ಭಾವುಕರು. ಹಾಗೆಯೇ ಭಾವನಾತ್ಮಕ ವಿಚಾರಗಳಲ್ಲಿ ಅತೀ ಎನಿಸುವ ವರ್ತನೆ ಇವರದ್ದು. ಈ ರಾಶಿಯವರು ಯಾವುದೇ ವ್ಯಕ್ತಿಗಳನ್ನು ಸೂಕ್ಷ್ಮವಾಗಿ ಗಮನಿಸುವ ಮತ್ತು ಅವರೊಂದಿಗೆ ಉತ್ತಮ ಸಂಬಂಧ ಏರ್ಪಡಿಸುವ ಕಲೆ ಹೊಂದಿರುತ್ತಾರೆ.
ಅವಗುಣಗಳೆಂದರೆ, ಇವರು ಎಷ್ಟು ಭಾವುಕರೋ ಅಷ್ಟೇ ಅದನ್ನು ದುರ್ಬಳಕೆ ಕೂಡಾ ಮಾಡುವರು. ಸಂಶಯ, ಭಯ ಜಾಸ್ತಿ. ಹಾಗೆಯೇ ತಮಗೆ ಕೆಲಸವಾಗಬೇಕೆಂದರೆ ಭಾವನಾತ್ಮಕವಾಗಿ ಇತರರನ್ನು ಸೆಳೆಯುವ ಗುಣವೂ ಇವರದ್ದಾಗಿರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ