Publish Date: Mon, 18 Feb 2019 (08:45 IST)
Updated Date: Mon, 18 Feb 2019 (08:47 IST)
ಬೆಂಗಳೂರು: ಜನ್ಮ ದಿನಾಂಕಕ್ಕೆ ಅನುಗುಣವಾಗಿ ಒಬ್ಬೊಬ್ಬರಿಗೆ ಅದೃಷ್ಟ ಸಂಖ್ಯೆ ಎಂದಿರುತ್ತದೆ. ಆಯಾ ಜನ್ಮ ದಿನಾಂಕಕ್ಕೆ ಅನುಸಾರವಾಗಿ ನಮ್ಮ ಭವಿಷ್ಯವೂ ನಿರ್ಧಾರವಾಗುತ್ತದೆ. ಇದೀಗ ಆಯಾ ಜನ್ಮ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಈ ವರ್ಷದ ಭವಿಷ್ಯ ಹೇಗಿದೆ ಎಂದು ತಿಳಿಯುತ್ತಾ ಸಾಗೋಣ.
ಜನ್ಮ ದಿನಾಂಕ 10 ರಿಂದ 31 ರವರೆಗೆ
ನಿಮ್ಮ ಜನ್ಮ ದಿನಾಂಕ 10 ರಿಂದ 31 ರವರೆಗೆ ಯಾವುದೇ ಆಗಿದ್ದರೂ ಈ ವರ್ಷ ತುಂಬಾ ಪ್ರಮುಖ ವರ್ಷ. ನಿಮ್ಮ ವೃತ್ತಿ, ಕೌಟುಂಬಿಕ ಜೀವನದಲ್ಲಿ ಒತ್ತಡ ಕಂಡುಬರುವುದು. ನಿಮ್ಮ ಸುಖ ದುಃಖ ನೀವು ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಿಂತಿರುತ್ತದೆ.
ನೀವು ಆರಂಭದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡ ವರ್ಷವಿಡೀ ಚೆನ್ನಾಗಿರಬಹುದು. ಅನಗತ್ಯವಾಗಿ ಯಾರಿಗೂ ಎದುರುತ್ತರ, ಪ್ರತಿಕ್ರಿಯೆ ಕೊಡಲು ಹೋಗಬೇಡಿ. ಸಕಾರಾತ್ಮಕ ಯೋಚನೆ ಮಾಡಿ. ನೀವು ಸಕಾರಾತ್ಮಕವಾಗಿದ್ದರೆ ಯಾರೂ ನಿಮ್ಮನ್ನು ಏನೂ ಮಾಡಲಾಗದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ