Publish Date: Mon, 14 Sep 2020 (08:48 IST)
Updated Date: Mon, 14 Sep 2020 (08:49 IST)
ಬೆಂಗಳೂರು: ಆಯಾ ರಾಶಿಗನುಗುಣವಾಗಿ ಚಂದ್ರತಾರೆಯ ಲಕ್ಷಣಗಳು ಒಂದೊಂದು ರೀತಿಯಲ್ಲಿರುತ್ತವೆ. ಚಂದ್ರ ಮನಸ್ಸಿನ ಭಾವನೆಗಳ ನಿಯಂತ್ರಕ ಎನ್ನುತ್ತಾರೆ. ಹಾಗಿದ್ದರೆ ಚಂದ್ರನ ಪ್ರಭಾವ ಯಾವ ರಾಶಿಯವರ ಮೇಲೆ ಯಾವ ರೀತಿ ಇರುತ್ತದೆ ಎನ್ನುವುದನ್ನು ನೋಡುತ್ತಾ ಸಾಗೋಣ.
ಮೀನ
ಚಂಚಲ ಮನಸ್ಸು ನಿಮ್ಮದಾಗಿರುತ್ತದೆ. ಹೀಗಾಗಿ ನಿಮಗೆ ನೀವೇ ಗಡಿರೇಖೆ ಹಾಕಿಕೊಂಡು ಶಿಸ್ತಿನ ಜೀವನ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು. ನಿಮ್ಮ ಭಾವನೆಗಳಿಗೆ ಕಡಿವಾಣ ಹಾಕುವುದು ಕಷ್ಟವಾಗಬಹುದು. ವಾಸ್ತವತೆಗೆ ಹೊಂದಿಕೊಳ್ಳುವುದನ್ನು ಕಲಿತುಕೊಳ್ಳಿ. ಇಲ್ಲವಾದರೆ ಇತರರೊಂದಿಗೆ ಹೊಂದಾಣಿಕೆ ಕಷ್ಟವಾಗಬಹುದು.