Publish Date: Mon, 07 Sep 2020 (08:48 IST)
Updated Date: Mon, 07 Sep 2020 (08:52 IST)
ಬೆಂಗಳೂರು: ಆಯಾ ರಾಶಿಗನುಗುಣವಾಗಿ ಚಂದ್ರತಾರೆಯ ಲಕ್ಷಣಗಳು ಒಂದೊಂದು ರೀತಿಯಲ್ಲಿರುತ್ತವೆ. ಚಂದ್ರ ಮನಸ್ಸಿನ ಭಾವನೆಗಳ ನಿಯಂತ್ರಕ ಎನ್ನುತ್ತಾರೆ. ಹಾಗಿದ್ದರೆ ಚಂದ್ರನ ಪ್ರಭಾವ ಯಾವ ರಾಶಿಯವರ ಮೇಲೆ ಯಾವ ರೀತಿ ಇರುತ್ತದೆ ಎನ್ನುವುದನ್ನು ನೋಡುತ್ತಾ ಸಾಗೋಣ.
ಕನ್ಯಾ
ಚಂದ್ರನು ಇವರಲ್ಲಿ ಕೆಲವೊಮ್ಮೆ ಒರಟುತನದ ಅಥವಾ ಅತಿಯಾದ ಮೃದು ಸ್ವಭಾವಕ್ಕೆ ಕಾರಣನಾಗುತ್ತಾನೆ. ಕೆಲವು ವಿಚಾರಗಳ ಬಗ್ಗೆ ಅತಿಯಾದ ಚಿಂತನೆ, ವಿಶ್ಲೇಷಣೆ ಮಾಡುತ್ತೀರಿ. ಮುಖವಾಡದ ಹಿಂದೆ ನಿಮ್ಮ ಭಾವನೆಗಳನ್ನು ಅಡಗಿಸಿಟ್ಟುಕೊಳ್ಳುತ್ತೀರಿ. ಇನ್ನೂ ಆಗದೇ ಇರುವ ವಿಚಾರದ ಬಗ್ಗೆ ನೀವೇ ಏನೋ ಕಲ್ಪಿಸಿಕೊಳ್ಳುವ ಗುಣವಿರುತ್ತದೆ.