Publish Date: Thu, 07 Mar 2019 (09:08 IST)
Updated Date: Thu, 07 Mar 2019 (09:09 IST)
ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ಒಂದೊಂದು ರಾಶಿಯವರ ಲವ್ ಲೈಫ್ ಒಂದೊಂದು ರೀತಿ ಇರುತ್ತದೆ. ಇಂದು ಕುಂಭ ರಾಶಿ ನೋಡೋಣ.
ಕುಂಭ ರಾಶಿಯವರು ಮಾನವತಾವಾದಿಗಳು. ಇವರು ಮನುಷ್ಯರ ಸಂಬಂಧಕ್ಕೆ ಬೆಲೆ ಕೊಡುತ್ತಾರೆ ನಿಜ. ಆದರೆ ಲವ್ ವಿಚಾರದಲ್ಲಿ ಇವರು ತುಂಬಾ ರೊಮ್ಯಾಂಟಿಕ್ ಆಗಿರಲಾರರು. ಆದರೆ ಉತ್ತಮ ಸ್ನೇಹಿತರಂತೂ ಆಗಿರುತ್ತಾರೆ. ಇವರ ಸ್ವಲ್ಪ ಪ್ರಾಕ್ಟಿಕಲ್ ಮನೋಭಾವ ಕೆಲವರಿಗೆ ಒಪ್ಪಿಕೊಳ್ಳಲು ಕಷ್ಟವಾಗಬಹುದು.
ಲವ್ ವಿಚಾರಕ್ಕೆ ಬಂದರೆ ಇವರನ್ನು ತೀರಾ ಹಿಡಿದಿಟ್ಟುಕೊಳ್ಳಲು ಸಾಧ‍್ಯವಿಲ್ಲ. ತಮ್ಮದೇ ಸ್ಥಾನ, ಸಮಯ ಬೇಕೆಂದು ಬಯಸುತ್ತಾರೆ. ತೀರಾ ಸಿನಿಮೀಯ ಶೈಲಿ ಇಷ್ಟಪಡುವವರಿಗೆ ಇವರನ್ನು ಲವ್ ಮಾಡಿದರೆ ಕಷ್ಟವಾಗಬಹುದು. ಆದರೆ ಇವರಂತೇ ಪ್ರಾಕ್ಟಿಕಲ್ ಆಗಿ ಯೋಚಿಸುವವರು ಈ ರಾಶಿಯವರನ್ನು ಲವ್ ಮಾಡಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ