ಬೆಂಗಳೂರು: ಏನೇ ಪೂಜೆ ಪುನಸ್ಕಾರ ಮಾಡಿದರೂ ಆಡಂಭರ, ವೈಭವಕ್ಕಿಂತ ಅದನ್ನು ಎಷ್ಟು ಭಕ್ತಿಯಿಂದ, ಶ್ರದ್ಧೆಯಿಂದ, ಕ್ರಮ ಪ್ರಕಾರ ಮಾಡುತ್ತೇವೆ ಎನ್ನುವುದು ಮುಖ್ಯ.
ಪೂಜೆ ಸರಿಯಾದ ರೀತಿಯಲ್ಲಿ ಮಾಡಿದರೆ ಮಾತ್ರ ಅದರ ಫಲ ನಮಗೆ ಸಿಗುವುದು. ದೇವರ ಪೂಜೆ ಮಾಡುವ ಮೊದಲು ಸಂಕಲ್ಪ ಮಾಡಿದರೆ ಮಾತ್ರ ದೇವರಿಗೆ ನಿಮ್ಮ ಪ್ರಾರ್ಥನೆಗಳು ಬೇಗನೇ ತಲುಪುತ್ತವೆ.
ಗಣಪತಿ ಪೂಜೆ, ಮನೆದೇವರ ಪೂಜೆ ಮಾಡಿದರೆ ಮಾತ್ರ ಪೂರ್ಣ ಪೂಜಾ ಫಲ ದೊರೆಯುವುದು. ದೇವಿಯು ಎಲ್ಲಾ ದೇವರುಗಳ ತಾಯಿಯಾದ್ದರಿಂದ ಅಮ್ಮನವರನ್ನು ಪೂಜಿಸಿದರೇ ನಮಗೆ ರಕ್ಷಣೆ. ಮನೆ ದೇವರ ಪೂಜೆಯಿಲ್ಲದಿದ್ದರೆ ಯಾವ ದೇವರುಗಳೂ ನಿಮ್ಮ ಮನೆಯನ್ನು ರಕ್ಷಿಸುವುದಿಲ್ಲ. ಎಂಥಾ ಕಷ್ಟ ಬಂದರೂ ನಮ್ಮ ಮನೆಯನ್ನು ರಕ್ಷಿಸುವವರು ಮನೆ ದೇವರೇ.
ಹೀಗಾಗಿ ಪೂಜಾ ಸಮಯದಲ್ಲಿ ಹಣೆಗೆ ಕುಂಕುಮ, ಗಂಧದ ತಿಲಕವಿಟ್ಟು, ಮಡಿ ವಸ್ತ್ರದಲ್ಲಿ ಕುಳಿತು ಭಕ್ತಿಯಿಂದ ಪೂಜೆ ಮಾಡಿದರೆ ಮಾತ್ರ ಪೂಜಾ ಫಲ ದೊರೆಯುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ