ಬೆಂಗಳೂರು: ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಕೋಪ ಎಂಬುದು ಬಂದೇ ಬರುತ್ತದೆ. ಆದರೆ ಈ ಕೋಪ ನಿಯಂತ್ರಿಸಲು ಏನು ದಾರಿಯಿದೆ? ನೋಡೋಣ.
ಕೋಪ ನಿಯಂತ್ರಿಸಲು ಮೂರು ದಾರಿಗಳಿವೆ. ಮೊದಲನೆಯದಾಗಿ ಕೋಪ ಬಂದಾಗ ಪ್ರತಿಕ್ರಿಯಿಸುವುದು. ನಮಗೆ ಕೋಪ ಬಂದಾಗ ಎಲ್ಲವನ್ನೂ ಹೇಳಿಕೊಂಡು ನಿರಾಳವಾಗುವುದು. ಆದರೆ ಇದರಿಂದ ಕೆಲವೊಮ್ಮೆ ಸಂಬಂಧ ಹಾಳಾಗುವ ಅಪಾಯವೂ ಇದೆ.
ಎರಡನೆಯದು ನಮ್ಮೊಳಗೇ ಕೋಪ ಅದುಮಿಟ್ಟುಕೊಳ್ಳುವುದು. ಕೋಪ ಬಂದಾಗ ಅದನ್ನು ತೋರ್ಪಡಿಸದೇ ಇರಬಹುದು. ಆದರೆ ಹೀಗೆ ಮಾಡುವುದರಿಂದ ನಮ್ಮೊಳಗಿನ ಮಾನಸಿಕ ಆರೋಗ್ಯ ಹಾಳಾಗಬಹುದು.