ಬೆಂಗಳೂರು: ಅರಿಶಿನ ಕುಂಕುಮ ಅಥವಾ ದಾನ, ಧರ್ಮ, ದಕ್ಷಿಣೆ ಕೊಡುವಾಗ ತಾಂಬೂಲ ನೀಡುವ ಪದ್ಧತಿ ಹಿಂದೂ ಸಂಪ್ರದಾಯದಲ್ಲಿದೆ.
ಆದರೆ ಈ ರೀತಿ ತಾಂಬೂಲ ಕೊಡುವಾಗ ಅದು ಕೊಳೆತಿದ್ದರೆ ಅದರ ಕೆಟ್ಟ ಫಲ ನಮ್ಮ ಮೇಲಾಗುವುದು ಎಂಬುದನ್ನು ಮರೆಯಬಾರದು.
ತಾಂಬೂಲ ಕೊಡುವಾಗ ವೀಳ್ಯದೆಲೆ ಅಥವಾ ಅಡಿಕೆ ಕೊಳೆತಿದ್ದರೆ ನೀವು ದರಿದ್ರರಾಗುತ್ತೀರಿ, ಸಾಲದ ಸಮಸ್ಯೆ ಜಾಸ್ತಿಯಾಗುತ್ತದೆ. ಯಾರ ಮನೆಯಲ್ಲಿ ತಾಂಬೂಲ ಕೊಟ್ಟರೂ ಅದನ್ನು ಮೊದಲು ದೇವರ ಮುಂದೆ ಇಟ್ಟು ನಮಸ್ಕರಿಸಿ ಅನಂತರ ಸರಿಯಾದ ರೀತಿಯಲ್ಲಿ ಬಳಸತಕ್ಕದ್ದು ಎಂದು ಶಾಸ್ತ್ರ ಹೇಳುತ್ತದೆ.