Publish Date: Tue, 19 Feb 2019 (09:11 IST)
Updated Date: Tue, 19 Feb 2019 (09:13 IST)
ಬೆಂಗಳೂರು: ಪೂರ್ವ, ಇಹ ಜನ್ಮದ ಪಾಪ ಕರ್ಮಗಳು ನಮ್ಮನ್ನು ಬಿಡದೇ ಕಾಡುವುದಿಲ್ಲ. ಈ ಪಾಪ ಕರ್ಮಗಳ ಪರಿಹಾರಕ್ಕೆ ಈ ಒಂದು ಸಿಂಪಲ್ ಕೆಲಸ ಮಾಡಿದರೆ ಸಾಕು.
ರಥಸಪ್ತಮಿ ದಿನ ಸೂರ್ಯನ ಆರಾಧನೆ ಮಾಡಿದರೆ ಪಾಪ ಕರ್ಮಗಳು ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ. ರೋಗ ನಿವಾರಣೆಗಾಗಿ, ಉತ್ತಮ ಆರೋಗ್ಯಕ್ಕಾಗಿಯೂ ರಥ ಸಪ್ತಮಿ ದಿನ ಸೂರ್ಯನ ಆರಾಧನೆ ಮಾಡಬಹುದು.
ರಥಸಪ್ತಮಿ ದಿನ ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ನೀಡಿದರೆ ಪೂರ್ವ ಜನ್ಮದ ಪಾಪಗಳು, ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತದೆ. ಸೂರ್ಯೋದಯಕ್ಕೆ ಮೊದಲು ಮಾಡುವ ಮಾಘ ಸ್ನಾನದಿಂದ ಆರೋಗ್ಯ, ಸಂಪತ್ತು, ಆಯಸ್ಸು ವೃದ್ಧಿಸುತ್ತದೆ ಎಂಬ ನಂಬಿಕೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ