ಬೆಂಗಳೂರು: ಜಪ ಮಾಡುವಾಗ ಕೆಲವೊಂದು ನಿಯಮಗಳಿವೆ. ಆ ನಿಯಮಗಳನ್ನು ಪಾಲಿಸಿಕೊಂಡು ಜಪ ಮಾಡಿದರೆ ಮಾತ್ರ ಅದರ ಫಲ ನಮಗೆ ಸಿಗುವುದು.
ಜಪ ಮಾಡುವಾಗ ಬರೀ ನೆಲದಲ್ಲಿ ಕೂರಬಾರದು. ವಸ್ತ್ರ, ಮಣೆ ಅಥವಾ ಹಾಸಿನ ಮೇಲೆ ಪೂರ್ವಾಭಿಮುಖವಾಗಿ ಕುಳಿತೇ ಜಪ ಮಾಡಬೇಕು.
ಜಪ ಮಣಿ ಎಣಿಸುವಾಗ ಹೆಬ್ಬೆರಳು ಮೂರು ಮತ್ತು ನಾಲ್ಕನೆಯ ಬೆರಳುಗಳನ್ನು ಮಾತ್ರ ಉಪಯೋಗಿಸಬೇಕು. ತೋರು ಬೆರಳು ಅಹಂಕಾರದ ಸಂಕೇತ. ಹಾಗಾಗಿ ಅದನ್ನು ಬಳಸಬಾರದು.ಮಾಡುವ ಜಪದ ಸಂಖ್ಯೆ ಲೆಕ್ಕ ಇಟ್ಟುಕೊಳ್ಳಬೇಕು. ಲೆಕ್ಕವಿಲ್ಲದ ಜಪ ಅಸುರ ಜಪವೆಂದು ಪರಿಗಣಿಸಲಾಗುತ್ತದೆ.
ಶಾಂತಿ, ಸೌಹಾರ್ದಯುತ ವಾತಾವರಣದಲ್ಲಿ ಕುಳಿತು ಏಕಾಗ್ರತೆಯಿಂದ ಮಾಡಿದ ಜಪ ಮಾತ್ರ ಭಗವಂತನನ್ನು ತಲುಪುತ್ತದೆ. ಆಗ ಮಾತ್ರ ಅದರ ಫಲ ನಮಗೆ ಸಿಗುತ್ತದೆ ಎನ್ನುವುದನ್ನು ಮರೆಯಬಾರದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ