ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಬುಧವಾರ, 9 ನವೆಂಬರ್ 2022 (08:10 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಇನ್ನೊಬ್ಬರಿಗೆ ನಿಮ್ಮ ಅತಿಯಾದ ಸಲಹೆಗಳೂ ಕಿರಿ ಕಿರಿ ಉಂಟುಮಾಡೀತು. ಸಂಗಾತಿಯೊಂದಿಗೆ ತಾಳ್ಮೆಯೊಂದಿಗೆ ವ್ಯವಹರಿಸಿ. ಇಷ್ಟಮಿತ್ರರೊಂದಿಗೆ ಉತ್ತಮ ಸಮಯ ಕಳೆಯುವ ಅವಕಾಶ. ದೇವತಾ ‍ಪ್ರಾರ್ಥನೆ ಮಾಡಿ.

ವೃಷಭ: ಕೆಲಸ ಕಾರ್ಯಗಳಲ್ಲಿ ನಿಮ್ಮ ಸಹಾಯಕ್ಕೆ ಯಾರೂ ಸಿಗದೇ ಇರುವಂತಹ ಪರಿಸ್ಥಿತಿ ನಿರ್ಮಾಣವಾದೀತು. ಸ್ವಯಂ ವೃತ್ತಿಯವರಿಗೆ ಮುನ್ನಡೆಯ ಯೋಗ. ಮಾತು ಮರೆತು ಸಂಗಾತಿಯ ಕೋಪಕ್ಕೆ ಗುರಿಯಾಗಲಿದ್ದೀರಿ.

ಮಿಥುನ: ಅಂದುಕೊಂಡಿದ್ದೇ ಒಂದು ಆದರೆ ಆಗುವುದು ಇನ್ನೊಂದು ಎಂಬ ಪರಿಸ್ಥಿತಿಯಾಗಲಿದೆ. ಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡಲಿದ್ದೀರಿ. ಉದ್ಯೋಗ, ವ್ಯವಹಾರದಲ್ಲಿ ಮೇಲಧಿಕಾರಿಗಳ ಪ್ರೋತ್ಸಾಹ ಸಿಗುವುದು.

ಕರ್ಕಟಕ: ಸರಕಾರಿ ಉದ್ಯೋಗಿಗಳಿಗೆ ಕಾರ್ಯದೊತ್ತಡ ಅಧಿಕವಾದೀತು. ಹಳೆಯ ಬಾಕಿ ಸಾಲ ತೀರಿಸಲು ಮುಂದಾಗಲಿದ್ದೀರಿ. ಸಂಗಾತಿಯಿಂದ ಅನಿರೀಕ್ಷಿತ ಉಡುಗೊರೆ ಪಡೆಯಲಿದ್ದೀರಿ. ತಾಳ್ಮೆಯಿರಲಿ.

ಸಿಂಹ: ಕಾರ್ಯರಂಗದಲ್ಲಿ ಜವಾಬ್ಧಾರಿಯುತ ನಡೆಯಿಂದ ಇತರರ ಮೆಚ್ಚುಗೆಗೆ ಪಾತ್ರರಾಗಲಿದ್ದೀರಿ. ದೈವಾನುಕೂಲದಿಂದ ನೀವು ಅಂದುಕೊಂಡ ಕೆಲಸ ಪೂರ್ತಿಯಾಗಲಿದೆ. ಆತ್ಮೀಯರನ್ನು ಭೇಟಿಯಾದ ಸಂತೋಷ ಸಿಗುವುದು.

ಕನ್ಯಾ: ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಗೆ ಒತ್ತು ನೀಡಿ. ಪಾಲುದಾರಿಕೆ ವ್ಯವಹಾರದಲ್ಲಿ ಕೆಲವೊಂದು ಬದಲಾವಣೆ ಅನಿವಾರ್ಯವಾದೀತು. ಯೋಗ್ಯ ವಯಸ್ಕರಿಗೆ ವಿವಾಹ ಮಾತುಕತೆಯಲ್ಲಿ ಮುನ್ನಡೆಯಿರಲಿದೆ.

ತುಲಾ: ಸಾಂಸಾರಿಕವಾಗಿ ಬರುವ ಕಷ್ಟಗಳನ್ನು ನಿಭಾಯಿಸಲು ಸಂಗಾತಿಯ ಸಾಥ್ ಸಿಗಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸಲಿದ್ದೀರಿ. ಕಲಾಸಕ್ತರಿಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಸಿಗಲಿದೆ. ದುಂದು ವೆಚ್ಚ ಬೇಡ.

ವೃಶ್ಚಿಕ: ಹಣಕಾಸಿನ ಹರಿವಿದ್ದರೂ ಅಷ್ಟೇ ಖರ್ಚೂ ಇರಲಿದೆ. ಹಿರಿಯರ ದೇಹಾರೋಗ್ಯದಲ್ಲಿ ಏರುಪೇರಾಗುವ ಸಾಧ‍್ಯತೆ. ಅನಿವಾರ್ಯ ಕಾರಣಗಳಿಗೆ ಅನ್ಯ ಊರಿಗೆ ಪ್ರಯಾಣಿಸಬೇಕಾದೀತು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಧನು: ನಿಮ್ಮ ಕೆಲಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅಪರಿಚಿತರನ್ನೂ ಸ್ನೇಹಿತರಾಗಿ ಮಾಡಲಿದ್ದೀರಿ. ಗೃಹ ರಿಪೇರಿ ಕೆಲಸಗಳಿಗೆ ಖರ್ಚು ವೆಚ್ಚಗಳಾದೀತು. ಸಂಗಾತಿಯ ಸಲಹೆಗಳಿಗೆ ಕಿವಿಗೊಡಬೇಕಾಗುತ್ತದೆ.

ಮಕರ: ನಿಮ್ಮ ಮಾತು ಇತರರಿಗೆ ಕಿರಿ ಕಿರಿಯಾಗದಂತೆ ಎಚ್ಚರಿಕೆ ವಹಿಸಿ. ಸಂಕಲ್ಪ ಮಾಡಿದ್ದ ಕೆಲಸಗಳು ಅರ್ಧಕ್ಕೇ ನಿಲ್ಲುವ ಸಾಧ‍್ಯತೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವುದು ಸಿಗಲಿದೆ. ಕುಲದೇವರ ಪ್ರಾರ್ಥಿಸಿ.

ಕುಂಭ: ಮನೆಗೆ ಅನಿರೀಕ್ಷಿತ ನೆಂಟರಿಷ್ಟರ ಆಗಮನವಾಗಲಿದ್ದು, ಸಂತೋಷದ ವಾತಾವರಣವಿರಲಿದೆ. ವಿಶೇಷ ವ್ಯಕ್ತಿಗಳಿಂದ ನಿಮ್ಮ ಜೀವನಕ್ಕೆ ಹೊಸ ತಿರುವು ಸಿಗುವುದು. ಪ್ರೇಮಿಗಳಿಗೆ ಪಾಲಿಗೆ ಶುಭ ದಿನವಾಗಿರಲಿದೆ.

ಮೀನ: ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡಲು ಮುಂದಾಗಲಿದ್ದೀರಿ. ಉದ್ಯೋಗ ವ್ಯವಹಾರದಲ್ಲಿ ಇನ್ನಷ್ಟು ಪರಿಶ್ರಮ ಪಡಬೇಕಾಗುತ್ತದೆ. ಹಣ ಗಳಿಕೆಗೆ ಅನ್ಯ ಮಾರ್ಗಗಳ ಬಗ್ಗೆ ಯೋಚನೆ ಮಾಡಲಿದ್ದೀರಿ. ದಾಂಪತ್ಯದಲ್ಲಿ ಸಾಮರಸ್ಯವಿರುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸೌಭಾಗ್ಯ ಲಕ್ಷ್ಮೀ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಗುರು ಪಾದುಕಾ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಜಾತಕದಲ್ಲಿ ಬುಧ ಗ್ರಹ ದೋಷವಿದ್ದರೆ ಈ ಮಂತ್ರ ಓದಿ

ಕುಜ ದೋಷವಿದ್ದರೆ ಇಂದು ಈ ಸ್ತೋತ್ರವನ್ನು ಓದಿ

ಸೋಮವಾರ ರುದ್ರಾಷ್ಟಕಂ ಮಂತ್ರವನ್ನು ತಪ್ಪದೇ ಜಪಿಸಿ

ಮುಂದಿನ ಸುದ್ದಿ
Show comments