Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಶುಕ್ರವಾರ, 4 ನವೆಂಬರ್ 2022 (08:10 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ವಿದ್ಯಾರ್ಥಿಗಳಿಗೆ, ರಾಜಕೀಯ ಮುಖಂಡರಿಗೆ ಮುನ್ನಡೆಯ ಯೋಗ. ಆಹಾರೋದ್ಯಮಿಗಳಿಗೆ ಆರ್ಥಿಕವಾಗಿ ಲಾಭವಾದೀತು. ಕಾರ್ಯನಿಮಿತ್ತ ಪ್ರಯಾಣ ಮಾಡುವುದರಿಂದ ದೇಹಾಯಾಸವಾದೀತು. ಎಚ್ಚರಿಕೆಯಿರಲಿ.

ವೃಷಭ: ವೈವಾಹಿಕ ಪ್ರಯತ್ನದಲ್ಲಿ ಪ್ರಗತಿ ಕಂಡುಬರಲಿದೆ. ಸಾಂಸಾರಿಕವಾಗಿ ನೆಮ್ಮದಿಯ ದಿನಗಳು. ಭೂ, ವಾಹನ ಖರೀದಿ ವಿಚಾರದಲ್ಲಿ ಮುನ್ನಡೆ ಕಂಡುಬರುವುದು. ಮಾತೃ ಸಮಾನರ ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಮಿಥುನ: ದಿಡೀರ್ ಆಗಿ ನಿರ್ಧಾರ ಕೈಗೊಳ್ಳುವ ಪ್ರವೃತ್ತಿ ಕಂಡುಬಂದೀತು. ಇನ್ನೊಬ್ಬರಿಗಾಗಿ ಬೇರೆ ಊರಿಗೆ ಪ್ರಯಾಣ ಮಾಡುವ ಪರಿಸ್ಥಿತಿ ಬಂದೀತು. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕರ್ಕಟಕ: ಮಹಿಳೆಯರಿಗೆ ವಸ್ತ್ರಾಭರಣಗಳ ಖರೀದಿ ಯೋಗ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಮಾತಿನ ಮೇಲೆ ಸಂಯಮವಿರಲಿ. ಆಭರಣೋದ್ಯಮಿಗಳಿಗೆ ಕಳ್ಳತನದ ಭೀತಿ. ಕಿರು ಸಂಚಾರ ಮಾಡಲಿದ್ದೀರಿ.

ಸಿಂಹ: ಸಜ್ಜನರ ಸಂಗದಿಂದ ಒಳ್ಳೆಯ ವಿಚಾರಗಳನ್ನು ಕಲಿಯಲಿದ್ದೀರಿ. ಕಾರ್ಯಕ್ಷೇತ್ರದಲ್ಲಿ ಹಿನ್ನಡೆಯಾದರೂ ಆಪ್ತರ ಸಾಥ್ ಸಿಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನ ಕರೆ ಬಂದೀತು. ವಿದೇಶ ಪ್ರವಾಸ ಯೋಗವಿದೆ.

ಕನ್ಯಾ: ಹಿರಿಯರು ಮಾಡಿದ ಪುಣ್ಯದ ಫಲದಿಂದ ಕಾರ್ಯಸಿದ್ಧಿಯಾದೀತು. ಮಹಿಳೆಯರಿಗೆ ಅನಿರೀಕ್ಷಿತ ಉಡುಗೊರೆ ಪಡೆಯುವ ಯೋಗ. ಬಂಧು ಮಿತ್ರರ ಆಗಮನವಾಗಲಿದೆ. ಅನಿರೀಕ್ಷಿತ ಖರ್ಚು ವೆಚ್ಚಗಳಿಗೆ ಸಿದ್ಧರಾಗಿ.

ತುಲಾ: ನಿರೀಕ್ಷಿತ ಸಮಯದಲ್ಲಿ ಧನಾಗಮನವಾಗುವುದರಿಂದ ಸಂಭಾವ್ಯ ಸಮಸ್ಯೆ ತಪ್ಪಿಹೋಗಲಿದೆ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಇದ್ದಲ್ಲಿ ಆರೋಗ್ಯ ಸಮಸ್ಯೆಯಾದೀತು. ವಿದ್ಯಾರ್ಥಿಗಳಿಗೆ ಉನ್ನತಿಯ ಯೋಗ.

ವೃಶ್ಚಿಕ: ನಿಮ್ಮ ಪರಿಶ್ರಮಕ್ಕೆ ತಕ್ಕ ಸ್ಥಾನ-ಮಾನಾದಿಗಳು ಒಲಿಯಲಿದೆ. ಆರ್ಥಿಕವಾಗಿ ಹಣ ಗಳಿಕೆಗೆ ನಾನಾ ಮಾರ್ಗಗಳು ಕಂಡುಬಂದೀತು. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ. ತಾಳ್ಮೆಯಿರಲಿ.

ಧನು: ಶರೀರ ಸಂಬಂಧವಾದ ನೋವು, ಆರೋಗ್ಯ ಸಮಸ್ಯೆಗಳು ಕೊಂಚ ಮಟ್ಟಿಗೆ ಸುಧಾರಿಸಲಿದೆ. ಸಂಗಾತಿಯ ಸಲಹೆಗಳಿಗೆ ಕಿವಿಗೊಡುವುದು ಉತ್ತಮ. ಮನೆ ರಿಪೇರಿ ಕೆಲಸಗಳಿಗೆ ಖರ್ಚು ವೆಚ್ಚಗಳಾದೀತು.

ಮಕರ: ಕೈಗೊಳ್ಳುವ ಕೆಲಸಗಳಲ್ಲಿ ಯಶಸ್ಸು ಸಿಗಬೇಕಾದರೆ ಸಾಮರ್ಥ್ಯ ಮೀರಿ ಪ್ರಯತ್ನ ನಡೆಸಬೇಕಾದೀತು. ಮಕ್ಕಳಿಂದ ಸಂತೋಷ ಸಿಗಲಿದೆ. ಸೌಂದರ್ಯ ವರ್ಧಕಗಳ ವ್ಯಾಪಾರಿಗಳಿಗೆ ಲಾಭವಾದೀತು. ದೇವತಾ ಪ್ರಾರ್ಥನೆ ಮಾಡಿ.

ಕುಂಭ: ಶುಭ ಕೆಲಸ ಮಾಡುವುದಿದ್ದರೂ ಹಿಂದೆ ಮುಂದೆ ನೋಡುವ ಪರಿಸ್ಥಿತಿಯಾದೀತು. ಮನೆಯ ಅಗತ್ಯಗಳಿಗೆ ಖರ್ಚು ವೆಚ್ಚವಾಗಲಿದೆ. ನೆರೆಹೊರೆಯವರೊಂದಿಗೆ ನಾಜೂಕಿನಿಂದ ವ್ಯವಹರಿಸಿ. ದೇವತಾ ಕಾರ್ಯ ನೆರವೇರಿಸಲಿದ್ದೀರಿ.

ಮೀನ: ದೇಹಾರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ದೂರವಾಗಲಿದ್ದು, ನೆಮ್ಮದಿಯಾಗಲಿದೆ. ಕೌಟುಂಬಿಕವಾಗಿ ಹೊಸ ಅತಿಥಿಗಳ ಆಗಮನಕ್ಕೆ ಸಿದ್ಧತೆ ನಡೆಸಲಿದ್ದೀರಿ. ವಾಹನಾದಿ ಸೌಕರ್ಯಗಳು ಶೀಘ್ರದಲ್ಲೇ ನಿಮ್ಮದಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?