Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಬೆಂಗಳೂರು , ಸೋಮವಾರ, 13 ಡಿಸೆಂಬರ್ 2021 (08:32 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ವೃತ್ತಿರಂಗದಲ್ಲಿ ನೀವು ಎಷ್ಟೇ ಕೆಲಸ ಮಾಡಿದರೂ ಅದಕ್ಕೆ ಪ್ರತಿಫಲ ಸಿಗುತ್ತಿಲ್ಲವೆಂಬ ಬೇಸರ ಕಾಡೀತು. ಹೊಸ ಬಗೆಯ ಪ್ರಯೋಗಗಳಿಗೆ ಮುಂದಾಗಲಿದ್ದೀರಿ. ಆರ್ಥಿಕವಾಗಿ ಚೇತರಿಕೆ ಕಂಡುಬಂದೀತು. ತಾಳ್ಮೆ ಅಗತ್ಯ.

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕಾಲೆಳೆಯುವವರನ್ನೂ ಮೀರುವಂತೆ ಬೆಳೆಯಲಿದ್ದೀರಿ. ಸರ್ಕಾರಿ ಉದ್ಯೋಗಿಗಳಿಗೆ ಬಿಡುವಿಲ್ಲದ ದುಡಿತ. ಆರ್ಥಿಕವಾಗಿ ಹಣಕಾಸಿನ ಹರಿವಿದ್ದರೂ ದುಂದು ವೆಚ್ಚಗಳಿಗೆ ಕಡಿವಾಣವಿರಲಿ.

ಮಿಥುನ: ಹೊಸದಾಗಿ ಆರಂಭಿಸಿದ್ದ ಉದ್ಯೋಗ, ವ್ಯವಹಾರಗಳು ಕೈಹಿಡಿಯಲಿವೆ. ಹಿರಿಯರ ಸಲಹೆಗಳಿಗೆ ಬೆಲೆ ಕೊಡಿ. ದೇಹಾರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ದೂರವಾಗಲಿದೆ. ದೇವತಾ ಪ್ರಾರ್ಥನೆ ಮಾಡಿ.

ಕರ್ಕಟಕ:  ವೈಯಕ್ತಿಕ ವಿಚಾರಗಳಲ್ಲಿ ಮೂರನೆಯವರು ಮಧ್ಯಪ್ರವೇಶಿಸಲು ಅವಕಾಶ ಕೊಡಬೇಡಿ. ಇಷ್ಟ ಭೋಜನ ಮಾಡುವ ಯೋಗ ನಿಮ್ಮದಾಗಲಿದೆ. ದೂರದ ವ್ಯವಹಾರಗಳಿಂದ ಧನಾಗಮನವಾಗಲಿದೆ. ಚಿಂತೆ ಬೇಡ.

ಸಿಂಹ: ಹೊಸ ಬಗೆಯ ಯೋಜನೆಗಳು ನಿಮಗೆ ಲಾಭ ತಂದುಕೊಡಲಿದೆ. ಶಾರೀರಿಕ ಸೌಖ್ಯವಿದ್ದರೂ ಮಾನಸಿಕವಾಗಿ ಹಲವು ಚಿಂತೆಗಳು ಕಾಡೀತು. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾಗಲಿವೆ.

ಕನ್ಯಾ: ಅನಗತ್ಯ ವಿಚಾರಗಳ ಬಗ್ಗೆ ತಲೆಕೆಡಿಸಿಕೊಂಡು ಮನಸ್ಸಿನ ನೆಮ್ಮದಿ ಹಾಳುಮಾಡಿಕೊಳ್ಳಬೇಡಿ. ನೂತನ ದಂಪತಿಗಳಿಗೆ ಸುಂದರ ಕ್ಷಣ ಕಳೆಯುವ ಯೋಗ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ತುಲಾ: ವ್ಯಾಪಾರೀ ವರ್ಗದವರಿಗೆ ಉನ್ನತಿಗೇರುವ ಅವಕಾಶಗಳಿವೆ. ಹಿತಶತ್ರುಗಳ ಕಾಟ ಕಡಿಮೆಯಾದೀತು. ವಾಸಸ್ಥಳ ಬದಲಾವಣೆಗೆ ಮನಸ್ಸು ಮಾಡಲಿದ್ದೀರಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ.

ವೃಶ್ಚಿಕ: ಅನಿರೀಕ್ಷಿತ ಧನಾಗಮನದಿಂದ ಅಂದುಕೊಂಡ ಕೆಲಸಗಳು ಸುಗಮವಾಗಿ ನೆರವೇರಲಿದೆ. ವೈಯಕ್ತಿಕ ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಪಾಲು ಬಂಡವಾಳ ಹೂಡಿಕೆ ವ್ಯವಹಾರಗಳಿಂದ ಲಾಭವಾಗಲಿದೆ.

ಧನು: ಹಿಂದೆ ಮಾಡಿದ್ದ ಹೂಡಿಕೆಗಳಿಗೆ ತಕ್ಕ ಫಲ ಪಡೆಯಲಿದ್ದೀರಿ. ಕಷ್ಟದಲ್ಲಿರುವ ಮಿತ್ರರಿಗೆ ಸಹಾಯ ಮಾಡುವ ಸಂದರ್ಭಗಳು ಎದುರಾಗಲಿವೆ. ಇಷ್ಟಭೋಜನ ಮಾಡುವ ಯೋಗ ನಿಮ್ಮದಾಗುವುದು. ತಾಳ್ಮೆಯಿರಲಿ.

ಮಕರ: ಪ್ರೀತಿ ಪಾತ್ರರೊಂದಿಗೆ ಸುಂದರ ಕ್ಷಣ ಕಳೆಯುವ ಯೋಗ ನಿಮ್ಮದಾಗುವುದು. ಇಷ್ಟಾರ್ಥ ಸಿದ್ಧಿಗಾಗಿ ದೇವರ ಮೊರೆ ಹೋಗಲಿದ್ದೀರಿ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.

ಕುಂಭ: ನಿಮ್ಮ ಮನಸ್ಸಿನಲ್ಲಿರುವ ವಿಚಾರಗಳನ್ನು ಕಾರ್ಯಗತಗೊಳಿಸಲು ಪ್ರಯತ್ನ ನಡೆಸಲಿದ್ದೀರಿ. ವ್ಯವಹಾರದಲ್ಲಿ ಪಾರದರ್ಶಕತೆಯಿರಲಿ. ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯಲಿದ್ದೀರಿ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ ಕಾದಿದೆ.

ಮೀನ: ಉದ್ಯೋಗ ಕ್ಷೇತ್ರದಲ್ಲಿ ಮೇಲ್ವರ್ಗಕ್ಕೇರುವ ನಿಮ್ಮ ಪ್ರಯತ್ನಗಳಿಗೆ ತಕ್ಕ ಫಲ ಸಿಗಲಿದೆ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿರಲಿ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ