ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
ಮೇಷ: ಹೊಸ ಜನರ ಭೇಟಿಯಿಂದ ನಿಮ್ಮ ಜೀವನದಲ್ಲಿ ಹೊಸ ಭರವಸೆಗಳು ಮೂಡಲಿವೆ. ನಿಮ್ಮ ಪಾಲಿನ ಸಂತೋಷವನ್ನು ನೀವೇ ಕಂಡುಕೊಳ್ಳಬೇಕು. ಕಷ್ಟವೆನಿಸುವ ವಿಚಾರದ ಬಗ್ಗೆ ಹೆಚ್ಚು ಯೋಚನೆ ಮಾಡಲು ಹೋಗಬೇಡಿ. ತಾಳ್ಮೆಯಿರಲಿ.
ವೃಷಭ: ಭರವಸೆಯೊಂದೇ ಇಂದಿನ ಬದುಕಲ್ಲಿ ನಿಮಗೆ ಹೊಸ ಚೈತನ್ಯ ನೀಡಲಿದೆ. ನಿರುದ್ಯೋಗಿಗಳಿಗೆ ನಿರಾಸೆಯಾದರೂ ಸ್ವಯ ಉದ್ಯೋಗದ ಐಡಿಯಾಗಳು ಹೊಳೆಯಲಿವೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.
ಮಿಥುನ: ಮಾನಸಿಕವಾಗಿ ಕಾಡುತ್ತಿದ್ದ ಸಮಸ್ಯೆಗಳಿಗೆ ಆಪ್ತರೊಂದಿಗೆ ಸಮಾಲೋಚಿಸಿ ಪರಿಹಾರ ಕಂಡುಕೊಳ್ಳುವಿರಿ. ಕುಟುಂಬಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವಾಗ ಸಂಗಾತಿಯೊಂದಿಗೆ ಪರಾಮರ್ಶಿಸಿ.
ಕರ್ಕಟಕ: ಆಸ್ತಿ ವಿಚಾರವಾಗಿ ನೆರೆಹೊರೆಯವರೊಂದಿಗೆ ವಾಗ್ವಾದವಾದೀತು. ಹಿರಿಯರ ಹಿತೋಪದೇಶಗಳನ್ನು ಪಾಲಿಸಿದರೆ ಉತ್ತಮ. ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲು ಖರ್ಚು ವೆಚ್ಚಗಳಾದೀತು. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ಸಿಂಹ: ಅನಿವಾರ್ಯ ಕಾರಣಗಳಿಗಾಗಿ ದೂರ ಸಂಚಾರ ಮಾಡುವ ಯೋಗ ಕೂಡಿಬಂದೀತು. ವಾಹನ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಮನೆಗೆ ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನ ಸೂಚನೆ ದೊರೆಯಲಿದೆ. ದೇವತಾ ಪ್ರಾರ್ಥನೆ ಮರೆಯದಿರಿ.
ಕನ್ಯಾ: ನಿಮ್ಮ ದೇಹದಲ್ಲಾಗುವ ಆರೋಗ್ಯ ಸಂಬಂಧೀ ಬದಲಾವಣೆಗಳಿಂದ ಚಿಂತೆಯಾದೀತು. ಸಂಗಾತಿಯೊಂದಿಗೆ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲಿದ್ದೀರಿ. ವ್ಯಾವಹಾರಿಕವಾಗಿ ಅಡೆತಡೆಗಳು ನಿವಾರಣೆಯಾಗಲಿದೆ.
ತುಲಾ: ಆತ್ಮೀಯರ ಕಷ್ಟಕ್ಕೆ ಸ್ಪಂದಿಸಲು ಹೋಗಿ ತೊಂದರೆಗೆ ಸಿಲುಕಿಕೊಳ್ಳುವ ಪರಿಸ್ಥಿತಿ ಎದುರಾದೀತು. ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ಆದಾಯ ಗಳಿಕೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ.
ವೃಶ್ಚಿಕ: ವೃತ್ತಿರಂಗದಲ್ಲಿ ಸಮಸ್ಯೆಗಳು ಬಂದಾಗ ಸಹೋದ್ಯೋಗಿಗಳ ನೆರವು ಪಡೆಯಲಿದ್ದೀರಿ. ಸರಕಾರಿ ಲೆಕ್ಕಪತ್ರಗಳನ್ನು ಜೋಪಾನವಾಗಿ ಸಂರಕ್ಷಿಸಿ. ಸಾಮಾಜಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಅನಗತ್ಯ ಚಿಂತೆ ಬೇಡ.
ಧನು: ಇಷ್ಟ ವಸ್ತುಗಳನ್ನು ಸೇವಿಸುವ ಚಪಲಕ್ಕೆ ಆರೋಗ್ಯ ಸಮಸ್ಯೆ ತಂದುಕೊಳ್ಳಬೇಡಿ. ಮಕ್ಕಳ ವಿಚಾರದಲ್ಲಿ ಅನಗತ್ಯ ಚಿಂತೆ ಮಾಡಲು ಹೋಗಬೇಡಿ. ವಿದ್ಯಾರ್ಥಿಗಳಿಗೆ ಭವಿಷ್ಯದ ದೃಷ್ಟಿಯಿಂದ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.
ಮಕರ: ಮನಸ್ಸಿಗೆ ಖುಷಿಕೊಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಚಿಂತೆ ಮರೆಯಬಹುದು. ಹಿರಿಯರ ದೇಹಾರೋಗ್ಯ ಸಂಬಂಧ ಆಸ್ಪತ್ರೆಗೆ ಅಲೆದಾಡಬೇಕಾದೀತು. ಅನಿರೀಕ್ಷಿತ ಖರ್ಚು ವೆಚ್ಚಗಳಿಗೆ ಸಿದ್ಧರಾಗಿ.
ಕುಂಭ: ಅನಿರೀಕ್ಷಿತವಾಗಿ ಭೇಟಿಯಾಗುವ ವ್ಯಕ್ತಿಗಳಿಂದ ನಿಮ್ಮ ಕೆಲಸಕ್ಕೆ ಸಹಾಯವಾಗಲಿದೆ. ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸುವಿರಿ. ದಾಂಪತ್ಯದಲ್ಲಿ ಹೊಂದಾಣಿಕೆಯಿರಲಿ.
ಮೀನ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳೊಂದಿಗೆ ಅನಗತ್ಯ ಸಂಘರ್ಷ ಬೇಡ. ವಾಹನ ಸವಾರರು ಚಾಲನೆಯಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ. ಹಿರಿಯರೊಂದಿಗೆ ಮಾತುಕತೆ ನಡೆಸುವಾಗ ಸಂಯಮ ಪಾಲಿಸಿದರೆ ಉತ್ತಮ.